ವೆಸ್ಟ್ ಇಂಡೀಸ್ ವೇಗದ ಬೌಲರ್ 2009 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ವೇಗ ಮತ್ತು ನಿಖರ ದಾಳಿಯ ದಾಳಿ ಮೂಲಕ ವಿಶ್ವ ಬ್ಯಾಟ್ಸ್ಮನ್ ನಡುಗಿಸಿದ್ದ ಎಡ್ವರ್ಡ್ಸ್, ಐಪಿಎಲ್‌ನಲ್ಲಿ ಆರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 6 ಪಂದ್ಯಗಳಲ್ಲಿ ಎಡ್ವರ್ಡ್ಸ್ ಉರುಳಿಸಿದ್ದು 5 ವಿಕೆಟ್ ಮಾತ್ರ. ಇದಾಗ್ಯೂ ಡೆಕ್ಕನ್ ಚಾರ್ಜರ್ಸ್ ಪರ ಚಾಂಪಿಯನ್ಸ್ ಲೀಗ್ ಟಿ20 ಯಲ್ಲೂ ಆಡಿದ್ದರು. ಆದರೆ ನಿರೀಕ್ಷಿತ ಯಶಸ್ಸು ಸಾಧಿಸಿರದ ಕಾರಣ ತಂಡದಿಂದ ಕೈ ಬಿಡಲಾಯಿತು.
2010 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡ್ರಿಯನ್ ಭರತ್ ಅವಕಾಶ ಪಡೆದಿದ್ದರು. ಆ ಸೀಸನ್ನಲ್ಲಿ ಮೂರು ಪಂದ್ಯಗಳನ್ನು ಆಡಿದ ಭರತ್ ಗಳಿಸಿದ್ದು 42 ರನ್ಗಳು ಮಾತ್ರ. ಮುಂಬೈ ವಿರುದ್ಧ 27 ಎಸೆತಗಳಲ್ಲಿ 33 ರನ್ ಗಳಿಸಿರುವುದು ಗರಿಷ್ಠ ಮೊತ್ತವಾಗಿತ್ತು. ಉಳಿದ 2 ಪಂದ್ಯಗಳಲ್ಲಿ ವಿಫಲವಾಗಿದ್ದೇ ತಡ ಕಿಂಗ್ಸ್ ಇಲೆವೆನ್ ಪಂಜಾಬ್ ಭರತ್ರನ್ನು ತಂಡದಿಂದ ಕೈಬಿಟ್ಟಿತು.