ಶಾನ್ ಮಾರ್ಷ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೊಚ್ಚಲ ಸೀಸನ್ನಲ್ಲಿ ಸ್ಟಾರ್ ಆಟಗಾರರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದು ಆಸ್ಟ್ರೇಲಿಯಾದ ಶಾನ್ ಮಾರ್ಷ್. ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ ಎಡಗೈ ಬ್ಯಾಟ್ಸ್‌ಮನ್, ಇಡೀ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಅನ್ನು ತನ್ನದಾಗಿಸಿಕೊಂಡಿದ್ದರು. ಐಪಿಎಲ್ 2008 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ 11 ಪಂದ್ಯಗಳಲ್ಲಿ ಶಾನ್ ಮಾರ್ಷ್ ಕಲೆಹಾಕಿದ್ದು 616 ರನ್ಗಳು. ಇದರಲ್ಲಿ ಒಂದು ಶತಕ ಹಾಗೂ 26 ಸಿಕ್ಸರ್‌ಗಳು ಮೂಡಿಬಂದಿದ್ದವು.
ಸನತ್ ಜಯಸೂರ್ಯ: ಕ್ರಿಸ್ ಗೇಲ್ ಐಪಿಎಲ್ ಇನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್ ಮತ್ತು ಅತ್ಯಧಿಕ ಸಿಕ್ಸರ್‌ಗಳ ದಾಖಲೆ ಬರೆದಿರಬಹುದು. ಆದರೆ ಶ್ರೀಲಂಕಾದ ಆರಂಭಿಕ ಆಟಗಾರ ಸನತ್ ಜಯಸೂರ್ಯ ಐಪಿಎಲ್ 2008ಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ದಾಖಲೆಯನ್ನು ಹೊಂದಿದ್ದರು . ಚೊಚ್ಚಲ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಸನತ್ ಜಯಸೂರ್ಯ ಒಟ್ಟು 518 ರನ್ ಗಳಿಸಿದ್ದರು. ಇದರಲ್ಲಿಒಂದು ಅತ್ಯುತ್ತಮ ಶತಕ ಕೂಡ ಸೇರಿದೆ. ಆ ಸೀಸನ್ನಲ್ಲಿ ಜಯಸೂರ್ಯ ಬ್ಯಾಟ್ನಿಂದ ಸಿಡಿದಿರುವುದು ಬರೋಬ್ಬರಿ 31 ಸಿಕ್ಸರ್‌ಗಳು.
ಸೊಹೈಲ್ ತನ್ವೀರ್: ಐಪಿಎಲ್ 2008 ರಲ್ಲಿ, ರಾಜಸ್ಥಾನ್ ರಾಯಲ್ಸ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆರ್ಆರ್ ತಂಡದ ಬೌಲರ್‌ಗಳು. ಅದರಲ್ಲೂ ತಂಡದಲ್ಲಿದ್ದ ಪಾಕಿಸ್ತಾನದ ವೇಗಿ ಸೋಹಲ್ ತನ್ವೀರ್. ಐಪಿಎಲ್ 2008 ರಲ್ಲಿ ಒಟ್ಟು 11 ಪಂದ್ಯಗಳನ್ನು ಆಡಿದ ತನ್ವೀರ್ 22 ವಿಕೆಟ್ ಉರುಳಿಸಿದ್ದರು. ಅದು ಕೂಡ 6.46 ಎಕನಾಮಿ ರೇಟ್ನಲ್ಲಿ ಎಂಬುದು ವಿಶೇಷ. ಈ ಅದ್ಭುತ ಬೌಲಿಂಗ್ ಮೂಲಕ ತನ್ವೀರ್ ಚೊಚ್ಚಲ ಪರ್ಪಲ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು.