# 3 ನಾಥನ್ ಕೌಲ್ಟರ್-ನೈಲ್: ಆಸ್ಟ್ರೇಲಿಯಾದ ವೇಗಿ ನಾಥನ್ ಕೌಲ್ಟರ್ ನೈಲ್ ಅವರನ್ನು ಮುಂಬೈ ಇಂಡಿಯನ್ಸ್ 8 ಕೋಟಿ ನೀಡಿ ಖರೀದಿಸಿತ್ತು. ಆದರೆ ಕಳೆದ ಸೀಸನ್ನಲ್ಲಿ ಬಲಗೈ ವೇಗಿಯಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ಇನ್ನು 2020ರಲ್ಲಿ ಜೇಮ್ಸ್ ಪ್ಯಾಟಿನ್ಸನ್ ಆಗಮನದೊಂದಿಗೆ ನೈಲ್ ಸೈಡ್ಗೆ ಸರಿದಿದ್ದರು. ಇನ್ನು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದ ನಾಥನ್ ಕೌಲ್ಟರ್ ನೈಲ್ 7 ಪಂದ್ಯಗಳಿಂದ ಪಡೆದಿದ್ದು ಕೇವಲ 5 ವಿಕೆಟ್ ಮಾತ್ರ. ಹಾಗೆಯೇ ಲಸಿತ್ ಮಾಲಿಂಗ ಅವರು ಮುಂಬೈಗೆ ಹಿಂತಿರುಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ಮುಂಬೈ ತಂಡ ನೈಲ್ ಅವರನ್ನು ಉಳಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.
#2 ಸೌರಭ್ ತಿವಾರಿ: ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೌರಭ್ ತಿವಾರಿ ಕಳೆದ ಸೀಸನ್ನಲ್ಲಿ ವಿಫಲರಾಗಿದ್ದರು. ಅದರಲ್ಲೂ ತಿವಾರಿ ಜಾಗದಲ್ಲಿ ಸ್ಥಾನ ಪಡೆದ ಇಶಾಂತ್ ಕಿಶನ್ ಅಬ್ಬರಿಸಿದರು. ಆ ಬಳಿಕ ಸೌರಭ್ ಬೆಂಚ್ ಕಾದಿದ್ದೇ ಬಂತು. ಇನ್ನು ಐಪಿಎಲ್ 2020ಯಲ್ಲಿ 7 ಪಂದ್ಯಗಳಿಂದ ಸೌರಭ್ ತಿವಾರಿ ಕಲೆಹಾಕಿದ್ದು ಬರೀ 103 ರನ್ಗಳು ಮಾತ್ರ. ಹೀಗಾಗಿ ಮುಂಬೈ ಇಂಡಿಯನ್ಸ್ ತಿವಾರಿಯನ್ನು ಕೈಬಿಟ್ಟು ಅವರ ಸ್ಥಾನಕ್ಕೆ ಮತ್ತೋರ್ವ ಯುವ ಆಟಗಾರರನನ್ನು ಆಯ್ಕೆ ಮಾಡಲಿದೆ.
#1 ಕ್ರಿಸ್ ಲಿನ್: 2020ರ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ಮನ್ ಕ್ರಿಸ್ ಲಿನ್ ಅವರನ್ನು ಮುಂಬೈ ಇಂಡಿಯನ್ಸ್ 2 ಕೋಟಿ ನೀಡಿ ಖರೀದಿಸಿತ್ತು. ಆದರೆ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಸಿರಲಿಲ್ಲ. ಮುಂಬೈ ಆರಂಭಿಕ ಕ್ವಿಂಟನ್ ಡಿಕಾಕ್ ಅಬ್ಬರದ ನಡುವೆ ಕ್ರಿಸ್ ಲಿನ್ ಇಡೀ ಟೂರ್ನಿಯಲ್ಲಿ ಬೆಂಚ್ ಕಾದಿದ್ದೇ ಬಂತು. ಅಂದರೆ ಕಳೆದ ಸೀಸನ್ನಲ್ಲಿ ಮುಂಬೈಗೆ ಲಿನ್ ಅವಶ್ಯಕತೆಯೇ ಬರಲಿಲ್ಲ ಎನ್ನಬಹುದು. ಇನ್ನು ಇಶಾಂತ್ ಕಿಶನ್ ಕೂಡ ಆರಂಭಿಕರಾಗಿ ಕಣಕ್ಕಿಳಿಯುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಈ ಬಾರಿ ಕ್ರಿಸ್ ಲಿನ್ ಅವರನ್ನು ಮುಂಬೈ ಇಂಡಿಯನ್ಸ್ ಕೈ ಬಿಡುವುದು ಬಹುತೇಕ ಖಚಿತ ಎಂದೇ ಹೇಳಬಹುದು.