ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟ್ಸ್ಮನ್ ಆರೋನ್ ಫಿಂಚ್ ಅವರನ್ನು 2015 ರಲ್ಲಿ 3.2 ಕೋಟಿಗೆ ಮುಂಬೈ ಇಂಡಿಯನ್ಸ್ ಖರೀದಿಸಿತು. ಅಗ್ರ ಕ್ರಮಾಂಕದಲ್ಲಿ ಪ್ರಚಂಡ ಇನ್ನಿಂಗ್ಸ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿದ್ದ ಆಸೀಸ್ ಬ್ಯಾಟ್ಸ್ಮನ್ ಮುಂಬೈ ಪರ ಮಿಂಚಲಿಲ್ಲ. ಮುಂಬೈ ಇಂಡಿಯನ್ಸ್ ಪರ ಕೇವಲ 3 ಪಂದ್ಯಗಳನ್ನು ಆಡಿದ್ದ ಫಿಂಚ್, 5, 8 ಮತ್ತು 10 ರನ್ ಗಳಿಸಲು ಮಾತ್ರ ಶಕ್ತರಾಗಿದ್ದರು. ಇದಾದ ಬಳಿಕ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಈ ಬಾರಿ ಫಿಂಚ್ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ.
ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್ ಕೂಡ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. ಆರ್ಸಿಬಿ ತಂಡದಿಂದ ಹೊರಬಿದ್ದಿದ್ದ ಯುವಿಯನ್ನು ಮುಂಬೈ 1 ಕೋಟಿ ನೀಡಿ ಖರೀದಿಸಿತ್ತು. ಆದರೆ ಫ್ರಾಂಚೈಸಿಗಳ ನಿರೀಕ್ಷೆಗಳು ತಲೆಕೆಳಗಾದವು. ಏಕೆಂದರೆ ಮುಂಬೈ ಪರ 4 ಪಂದ್ಯಗಳನ್ನಾಡಿದ ಯುವರಾಜ್ ಸಿಂಗ್ ಗಳಿಸಿದ್ದು ಕೇವಲ 98 ರನ್. ಆ ಬಳಿಕ ತಂಡ ಅವಕಾಶಗಳು ದೊರೆಯಲಿಲ್ಲ. ಅಲ್ಲದೆ ಮರು ವರ್ಷವೇ ತಂಡದಿಂದ ಯುವರಾಜ್ ಸಿಂಗ್ ಅವರನ್ನು ತಂಡದಿಂದ ಕೈ ಬಿಡಲಾಯಿತು.
ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಮುಂಬೈ ಇಂಡಿಯನ್ಸ್ 2013 ರ ಐಪಿಎಲ್ ಹರಾಜಿನಲ್ಲಿ 7.5 ಕೋಟಿಗೆ ಖರೀದಿಸಿತು. ಬೃಹತ್ ಮೊತ್ತವನ್ನು ಖರ್ಚು ಮಾಡಿದರೂ, ಮ್ಯಾಕ್ಸ್ವೆಲ್ ಮುಂಬೈ ಪರ ಕೇವಲ 3 ಪಂದ್ಯಗಳನ್ನು ಮಾತ್ರ. ಇದರಲ್ಲಿ ಗಳಿಸಿದ್ದು 36 ರನ್ ಅಷ್ಟೇ. ಇದಲ್ಲದೆ ಅವರು 2 ಓವರ್ಗಳನ್ನು 23 ರನ್ಗಳನ್ನೂ ನೀಡಿದ್ದರು. 2013ರ ಸೀಸನ್ ಬಳಿಕ ಮ್ಯಾಕ್ಸ್ವೆಲ್ ಅವರನ್ನು ಮುಂಬೈ ಇಂಡಿಯನ್ಸ್ ಕೈ ಬಿಟ್ಟಿತ್ತು. ಈ ಬಾರಿ ಕಿಂಗ್ಸ್ ಇಲೆವೆನ್ ಪರ ಕಣಕ್ಕಿಳಿಯಲಿದ್ದಾರೆ ಆಸೀಸ್ ಆಟಗಾರ.