IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದಲ್ಲಿ ಚೆಂಡೆಸೆಯುವ ಮೂಲಕ ದಾಖಲೆ ಬರೆದಿಟ್ಟಿದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಐಪಿಎಲ್​ನಲ್ಲಿ ಮೂರು ಎಸೆತಗಳು ಅತ್ಯಂತ ವೇಗದ ಬೌಲಿಂಗ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

First published:

  • 18

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ಪ್ರಾಬಲ್ಯ. ಹೀಗಾಗಿಯೇ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬ್ಯಾಟ್ಸ್​ಮನ್​ಗಳಿಂದಲೇ ಅನೇಕ ದಾಖಲೆಗಳು ಮೂಡಿ ಬಂದಿರುವುದು. ಆದರೆ ಕೆಲವೊಂದು ಪಂದ್ಯಗಳನ್ನು ದಿಕ್ಕನ್ನೇ ಬದಲಿಸಿದ ಕೆಲ ಬೌಲರುಗಳು ಕೂಡ ಇದ್ದಾರೆ.

    MORE
    GALLERIES

  • 28

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಆದರೆ ಹೊಡಿಬಡಿ ಆಟದ ಮುಂದೆ ಇಂತಹ ಸಾಧನೆಗಳು ಹೆಚ್ಚು ಬೆಳಕಿಗೆ ಬರುವುದೇ ಇಲ್ಲ. ಐಪಿಎಲ್​ನಲ್ಲಿ ಬೌಲರುಗಳು ಗಮನ ಸೆಳೆದಿರುವುದು ಹ್ಯಾಟ್ರಿಕ್ ವಿಕೆಟ್ ಅಥವಾ ನಾಲ್ಕು/ ಐದು ವಿಕೆಟ್ ಉರುಳಿಸಿ ಮಾತ್ರ.

    MORE
    GALLERIES

  • 38

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಆದಾಗ್ಯೂ, ಕೆಲವೊಮ್ಮೆ ಬೌಲರ್ ಕಡಿಮೆ ರನ್ ನೀಡಿ ಕೂಡ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ಇದರ ಹೊರತಾಗಿ ಬೌಲರುಗಳ ಚರ್ಚೆ ಬರುವುದು ಯಾರು ಅತೀ ರನ್ ನೀಡಿರುವುದು ಎಂಬ ವಿಷಯದಲ್ಲಿ ಮಾತ್ರ. ಆದರೆ ಐಪಿಎಲ್​ನಲ್ಲೂ ಅದ್ಭುತ ಸ್ಪೆಲ್ ಮೂಲಕ ಕೆಲವು ವೇಗಿಗಳು ಮಿಂಚಿದ್ದಾರೆ.

    MORE
    GALLERIES

  • 48

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಅದರಲ್ಲೂ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದಲ್ಲಿ ಚೆಂಡೆಸೆಯುವ ಮೂಲಕ ದಾಖಲೆ ಬರೆದಿಟ್ಟಿದ್ದಾರೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಹೌದು, ಐಪಿಎಲ್​ನಲ್ಲಿ ಮೂರು ಎಸೆತಗಳು ಅತ್ಯಂತ ವೇಗದ ಬೌಲಿಂಗ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅದನ್ನು ಎಸೆದವರು ಯಾರು? ಯಾವ ವೇಗದಲ್ಲಿ ಎಂಬುದರ ಮಾಹಿತಿ ಇಲ್ಲಿದೆ ನೋಡಿ.

    MORE
    GALLERIES

  • 58

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಕಗಿಸೊ ರಬಡಾ: ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡಾ ಐಪಿಎಲ್‌ನ ಮೂರನೇ ಅತಿ ವೇಗದ ಬೌಲರ್. 2012 ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಈ ಸಾಧನೆ ಮಾಡಿದ್ದರು. ರಬಾಡಾ 153.91 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    MORE
    GALLERIES

  • 68

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಇನ್ನು ಐಪಿಎಲ್‌ನಲ್ಲಿ ಎರಡನೇ ಅತಿ ವೇಗದ ಚೆಂಡನ್ನು ಎಸೆದ ಶ್ರೇಯಸ್ಸು ಕೂಡ ಕಗಿಸೊ ರಬಾಡಾಗೆ ಸಲ್ಲುತ್ತದೆ. 2019 ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವೇಗಿ 154 ಕಿ.ಮೀ ವೇಗದಲ್ಲಿ ಬೌಲ್ ಮಾಡಿದರು. ಈ ಬಾರಿಯೂ ಸಹ ರಬಾಡರಿಂದ ನೇರ ನಿಖರ ದಾಳಿ ನಿರೀಕ್ಷಿಸಬಹುದು.

    MORE
    GALLERIES

  • 78

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಡೇಲ್ ಸ್ಟೈನ್: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಚೆಂಡೆಸೆದ ದಾಖಲೆ ದಕ್ಷಿಣ ಆಫ್ರಿಕಾದ ಬೌಲರ್ ಡೇಲ್ ಸ್ಟೈನ್ ಹೆಸರಿನಲ್ಲಿದೆ. 2012 ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಬೌಲಿಂಗ್ ಮಾಡಿದ್ದ ಸ್ಟೈನ್ 154.4 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದರು.

    MORE
    GALLERIES

  • 88

    IPL ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು ಗೊತ್ತಾ?

    ಇದು ಐಪಿಎಲ್‌ನಲ್ಲಿ ಹೊಸ ದಾಖಲೆ ನಿರ್ಮಿಸಿತು. ಕಳೆದ 7 ವರ್ಷಗಳಿಂದ ಯಾವುದೇ ಬೌಲರ್ ಡೇಲ್ ಸ್ಟೈನ್​ರ ಈ ದಾಖಲೆಯನ್ನು ಯಾವ ಬೌಲರ್‌ಗೂ ಮುರಿಯಲು ಸಾಧ್ಯವಾಗಿಲ್ಲ. ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯುತ್ತಿರುವ ಡೇಲ್ ಸ್ಟೈನ್ ರನ್ನು ಕೊಹ್ಲಿ ವೇಗದ ಅಸ್ತ್ರವಾಗಿ ಪ್ರಯೋಗಿಸಲಿದ್ದಾರೆ.

    MORE
    GALLERIES