ಯುವ ಪ್ರತಿಭೆಗಳನ್ನು ಸ್ಟಾರ್ ಆಟಗಾರರನ್ನಾಗಿ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಕೂಡ ಐಪಿಎಲ್ಗೆ ಸಲ್ಲಬೇಕು. ಅದರಲ್ಲೂ ಐಪಿಎಲ್ನಿಂದಾಗಿಯೇ 2011 ರ ವಿಶ್ವಕಪ್ ಗೆಲ್ಲುವಲ್ಲಿ ಟೀಂ ಇಂಡಿಯಾಗೆ ಸಾಧ್ಯವಾಯಿತು ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಏಕೆಂದರೆ ಚುಟುಕು ಕ್ರಿಕೆಟ್ನಲ್ಲಿ ಮಿಂಚುತ್ತಿದ್ದ ಆಟಗಾರರನ್ನು ಮತ್ತು ಅನುಭವಿಗಳನ್ನು ಸೇರಿಸಿ ಧೋನಿ ಎರಡನೇ ಬಾರಿ ಭಾರತಕ್ಕೆ ವರ್ಲ್ಡ್ ಕಪ್ ಕಿರೀಟ ತೊಡಿಸಿದ್ದರು.
ಚುಟುಕು ಕ್ರಿಕೆಟ್ಗೆ ವಿಶ್ವ ಮಟ್ಟದಲ್ಲಿ ಹೊಸ ಸ್ವರೂಪ ನೀಡಿದ್ದ ಐಪಿಎಲ್ ಆರಂಭದಲ್ಲಿ ಕ್ರಿಕೆಟ್ ಆಡುವ ಎಲ್ಲಾ ದೇಶಗಳ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಅದರಂತೆ ಪಾಕಿಸ್ತಾನ ಸೇರಿದಂತೆ ವಿಶ್ವ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಿದ್ದರು. ಅದರಲ್ಲೂ ಪಾಕ್ ತಂಡದ 11 ಸ್ಟಾರ್ ಆಟಗಾರರು ಮೊದಲ ಆವೃತ್ತಿಯಲ್ಲೇ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಅವರೆಂದರೆ...
ಆದರೆ ಆಡಿದ 10 ಪಂದ್ಯಗಳಲ್ಲಿ 10.12 ಸರಾಸರಿಯಲ್ಲಿ ಒಟ್ಟಾರೆ 81 ರನ್ ಗಳಿಸಲು ಮಾತ್ರ ಬೂಮ್ ಬೂಮ್ ಅಫ್ರಿದಿ ಶಕ್ತರಾಗಿದ್ದರು. ಇನ್ನು ಲೆಗ್ ಸ್ಪಿನ್ ಬೌಲಿಂಗ್ ಮಾಡುವ ಅಫ್ರಿದಿ ಐಪಿಎಲ್ನಲ್ಲಿ 28ಕ್ಕೆ 3 ವಿಕೆಟ್ನೊಂದಿಗೆ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ವಿವಿಎಸ್ ಲಕ್ಷ್ಮಣ್, ರೋಹಿತ್ ಶರ್ಮಾ, ಆಡಂ ಗಿಲ್‌ಕ್ರಿಸ್ಟ್ ಮತ್ತು ಆಂಡ್ರ್ಯೂ ಸೈಮಂಡ್ಸ್‌ರಂತಹ ಸ್ಟಾರ್ ಆಟಗಾರರಿದ್ದರೂ ಡೆಕ್ಕನ್ ಚಾರ್ಜರ್ಸ್ ಸಾಂಘಿಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು.