Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

ಮತದಾರರು ನನ್ನ ಮುಖ ನೋಡಿ ನನ್ನ ಜಾತಿ, ಹಾವಭಾವ ಗಮನಿಸಿ ಮತ ಹಾಕೋದು ಬೇಡ. ಕೇವಲ ನಮ್ಮ ಯೋಚನೆಗಳನ್ನು ಗಮನಿಸಿ ಮತದಾನ ಮಾಡಲಿ ಎಂಬ ಉದ್ದೇಶ ಇಷ್ಟಲಿಂಗ ಅವರದ್ದು. 

First published:

 • 17

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಈ ಪಕ್ಷದ ಕಾರ್ಯಕರ್ತರು ಸಹ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಚರ್ಚೆಗಳಲ್ಲಿ ನಿರತರಾಗುತ್ತಲೇ ಇರುತ್ತಾರೆ. ತಮ್ಮ ನೆಚ್ಚಿನ ಉಪೇಂದ್ರ ಅವರ ವಿಭಿನ್ನತೆಯ ಬಗ್ಗೆ ಪ್ರಚಾರ ಮಾಡುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ಹುಬ್ಬಳ್ಳಿ ಧಾರವಾಡದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಚುನಾವಣಾ ಅಭ್ಯರ್ಥಿಗಳು ಸಹ ಅಷ್ಟೇ ವಿಭಿನ್ನತೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 37

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿಯ ಹೆಸರು MSc ಪದವೀಧರ ಇಷ್ಟಲಿಂಗ. ಆಯತಾಕಾರದ ಕನ್ನಡಿಯೊಳಗೆ ಮುಖ ಇಟ್ಟುಕೊಂಡು ಅವರು ಪ್ರಚಾರ ಮಾಡುತ್ತಿರುವುದು ಕ್ಷೇತ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

  MORE
  GALLERIES

 • 47

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ಇಷ್ಟಲಿಂಗ ಅವರು ಹೀಗೆ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ, “ಜಾತಿಯನ್ನು ನೋಡದೇ ಹೊಸ ಹೊಸ ಐಡಿಯಾಗಳನ್ನು ಗಮನದಲ್ಲಿಟ್ಟುಕೊಂಡು ಮತದಾರರು ತಮ್ಮ ಹಕ್ಕು ಚಲಾಯಿಸಬೇಕು. ಹೀಗಾಗಿ ನನ್ನ ಮುಖ ತೋರಿಸದೇ ಕೇವಲ ನಮ್ಮ ಯೋಜನೆಗಳ ಮೂಲಕವೇ ಮತ ಚಲಾಯಿಸಲು ನಾನು ಕನ್ನಡಿಯೊಳಗೆ ಮುಖ ಇಟ್ಟುಕೊಂಡು ಪ್ರಚಾರ ಮಾಡುತ್ತಿದ್ದೇನೆ” ಎನ್ನುತ್ತಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 57

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ಮತದಾರರು ನನ್ನ ಮುಖ ನೋಡಿ ನನ್ನ ಜಾತಿ, ಹಾವಭಾವ ಗಮನಿಸಿ ಮತ ಹಾಕೋದು ಬೇಡ. ಕೇವಲ ನಮ್ಮ ಯೋಚನೆಗಳನ್ನು ಗಮನಿಸಿ ಮತದಾನ ಮಾಡಲಿ ಎಂಬ ಉದ್ದೇಶ ಇಷ್ಟಲಿಂಗ ಅವರದ್ದು.

  MORE
  GALLERIES

 • 67

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ಉತ್ತಮ ಪ್ರಜಾಕೀಯ ಪಕ್ಷದ ಇನ್ನೋರ್ವ ಅಭ್ಯರ್ಥಿ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಸಂತೋಷ್ ಅವರದ್ದು ಸಹ ವಿಭಿನ್ನವಾಗಿ ಪ್ರಚಾರ ಮಾಡುತ್ತಿದ್ದಾರೆ. ಕೇವಲ ಸಾಮಾಜಿಕ ಜಾಲತಾಣಗಳ ಮೂಲಕವೇ ಅವರು ದಿನನಿತ್ಯ ಸಾವಿರಾರು ಜನರನ್ನು ತಲುಪುತ್ತಿರುವುದಾಗಿ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES

 • 77

  Viral Photo: ಈ ಅಭ್ಯರ್ಥಿ ನಿಮಗೆ ಮುಖ ತೋರಿಸದೇ ಪ್ರಚಾರ ಮಾಡ್ತಾರೆ!

  ಒಟ್ಟಾರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಿಯಲ್ ಸ್ಟಾರ್ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು, ಕಾರ್ಯಕರ್ತರು ಸಹ ವಿಭಿನ್ನ ರೀತಿಯ ಪ್ರಚಾರಕ್ಕೆ ಮೊರೆ ಹೋಗ್ತಿದ್ದಾರೆ. (ಸಾಂದರ್ಭಿಕ ಚಿತ್ರ)

  MORE
  GALLERIES