ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. (ಸಾಂದರ್ಭಿಕ ಚಿತ್ರ)
2/ 8
ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಧಾರವಾಡದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಅವಳಿ ನಗರಗಳ ನಡುವೆ ಜನಸಾಮಾನ್ಯರ ಓಡಾಟಕ್ಕೆ ಅನಾನುಕೂಲವಾಗಬಾರದು ಎಂಬ ಕಾರಣ ಈ ವಿಶೇಷ ರೈಲುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. (ಸಾಂದರ್ಭಿಕ ಚಿತ್ರ)
3/ 8
ಈ ವಿಶೇಷ ರೈಲುಗಳು ರಿಸರ್ವ್ ಮಾಡದ ರೈಲುಗಳಾಗಿರೋದು ಇನ್ನೊಂದು ವಿಶೇಷ. ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸುವವರಿಗೆ ಎಂದೇ ಈ ರೈಲುಗಳನ್ನು ಆರಂಭಿಸಲಾಗಿದೆ. (ಸಾಂದರ್ಭಿಕ ಚಿತ್ರ)
4/ 8
ಅವಳಿ ನಗರಗಳ ನಡುವಿನ ವಿಶೇಷ ರೈಲು ಜನವರಿ 11ರಂದು ಧಾರವಾಡ ಎಸ್.ಎಸ್.ಎಸ್ ಹುಬ್ಬಳ್ಳಿ ಗಾಡಿ ಸಂಖ್ಯೆ 07369 ವಿಶೇಷ ರೈಲು ಮಧ್ಯಾಹ್ನ 12.30ಕ್ಕೆ ಹೊರಟು ಮಧ್ಯಾಹ್ನ 1.05 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿಗೆ ತಲುಪಲಿದೆ. (ಸಾಂದರ್ಭಿಕ ಚಿತ್ರ)
5/ 8
ಇನ್ನೊಂದು ರೈಲಿನ ವಿವರ ಹೀಗಿದೆ. ಎಸ್.ಎಸ್.ಎಸ್ ಹುಬ್ಬಳ್ಳಿ - ಧಾರವಾಡ ಗಾಡಿ ಸಂಖ್ಯೆ 07370 ವಿಶೇಷ ರೈಲು ಹುಬ್ಬಳ್ಳಿಯಿಂದ ಸಂಜೆ 4 ಗಂಟೆಗೆ ಹೊರಟು ಸಂಜೆ 4.28ಕ್ಕೆ ಧಾರವಾಡ ರೈಲು ನಿಲ್ದಾಣವನ್ನು ತಲುಪುತ್ತದೆ. (ಸಾಂದರ್ಭಿಕ ಚಿತ್ರ)
6/ 8
ಜನವರಿ 12ರಂದು ಧಾರವಾಡ ಎಸ್.ಎಸ್.ಎಸ್ ಹುಬ್ಬಳ್ಳಿ 07371 ವಿಶೇಷ ರೈಲು ಮಧ್ಯಾಹ್ನ 12 ಗಂಟೆಗೆ ಧಾರವಾಡದಿಂದ ಹೊರಡಲಿದೆ. 12.30ಕ್ಕೆ ಎಸ್.ಎಸ್.ಎಸ್ ಹುಬ್ಬಳ್ಳಿ ತಲುಪುತ್ತದೆ. (ಸಾಂದರ್ಭಿಕ ಚಿತ್ರ)
7/ 8
ರೈಲು ಸಂಖ್ಯೆ 07372 ವಿಶೇಷ ರೈಲು ಸಂಜೆ 6 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿಯಿಂದ ಹೊರಡಲಿದ್ದು ಸಂಜೆ 6.30ಕ್ಕೆ ಧಾರವಾಡ ರೈಲು ನಿಲ್ದಾಣವನ್ನು ತಲುಪಲಿದೆ. (ಸಾಂದರ್ಭಿಕ ಚಿತ್ರ)
8/ 8
ಒಟ್ಟಾರೆ ರಾಷ್ಟ್ರೀಯ ಯುವಜನೋತ್ಸವಕ್ಕೆ ಭಾರತೀಯ ರೈಲ್ವೆಯು ಸಹ ತನ್ನದೇ ವಿಶೇಷ ಸೇವೆಯನ್ನು ಒದಗಿಸುತ್ತಿದೆ. (ಸಾಂದರ್ಭಿಕ ಚಿತ್ರ)