5ನೇ ಬಾರಿಗೆ ಬಜೆಟ್ ಮಂಡಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಉಟ್ಟಿರುವ ಸೀರೆಗೂ ಕರ್ನಾಟಕಕ್ಕೂ ಕುತೂಹಲಕರ ಲಿಂಕ್ ಇದೆ.
2/ 7
ವಿತ್ತ ಸಚಿವೆ ಬಜೆಟ್ ಮಂಡನೆ ಮಾಡುವಾಗ ಧರಿಸಿದ ಸೀರೆ ಎಲ್ಲರ ಗಮನ ಸೆಳೆದಿತ್ತು. ಅಂದಹಾಗೆ ನಿರ್ಮಲಾ ಸೀತಾರಾಮನ್ ಧರಿಸಿರುವುದು ಧಾರವಾಡ ಜಿಲ್ಲೆಯ ನವಲಗುಂದದ ಪ್ರಸಿದ್ಧ ಕಸೂತಿ ಕಲೆಯಿಂದ ತಯಾರಾದ ಸೀರೆ!
3/ 7
ಹೌದು, ನಮ್ಮ ಕರ್ನಾಟಕದ ಸಂಸ್ಕೃತಿಯ ಧಿರಿಸನ್ನು ತೊಟ್ಟು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ್ದಾರೆ.
4/ 7
ನಿರ್ಮಲಾ ಸೀತಾರಾಮನ್ ಅವರು ಧರಿಸಿದ್ದ ಕೆಂಪು ಮರೂನ್ ಬಣ್ಣದ ಸೀರೆಯಲ್ಲಿ ನವಲಗುಂದದ ಕಸೂತಿ ಮಾಡಲಾಗಿದೆ. ಈ ಸೀರೆಯನ್ನು ಧಾರವಾಡದ ಆರತಿ ಕ್ರಾಫ್ಟ್ಸ್ನಲ್ಲಿ ತಯಾರಿಸಲಾಗಿದೆ. ಕೈಮಗ್ಗದಲ್ಲಿ ನೇಯ್ದ ಇಳಕಲ್ಲಿನ ರೇಷ್ಮೆ ಸೀರೆಗೆ ನವಲಗುಂದ ಕಸೂತಿ ರಚಿಸಲಾಗಿದೆ.
5/ 7
ಸಚಿವ ಪ್ರಲ್ಹಾದ ಜೋಶಿ ತಮ್ಮ ಸಹೋದ್ಯೋಗಿ ನಿರ್ಮಲಾ ಸೀತಾರಾಮನ್ ಅವರಿಗೆ ಈ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಚಿಕ್ಕಪರಾಸ್ ದಡಿ, ತೇರು ಗೋಪುರ, ನವಿಲು, ಕಮಲದ ಕಸೂತಿ ಹೊಂದಿರುವ ಈ ಸೀರೆಯನ್ನು ಧರಿಸಿ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ.
6/ 7
ಖುದ್ದು ನಿರ್ಮಲಾ ಸೀತಾರಾಮನ್ ಅವರೇ ಸೀರೆಯ ಬಣ್ಣ ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಏಳು ಬಣ್ಣದ ಸೀರೆಗಳನ್ನು ನಿರ್ಮಲಾ ಸೀತಾರಾಮನ್ ಅವರಿಗೆ ರವಾನೆ ಮಾಡಲಾಗಿತ್ತು. ಅವುಗಳಲ್ಲಿ ನಿರ್ಮಲಾ ಸೀತಾರಾಮನ್ 2 ಸೀರೆಗಳನ್ನು ಆರಿಸಿಕೊಂಡಿದ್ದರು.
7/ 7
ಅವರು ಸೀರೆಗಳನ್ನು ಆಯ್ಕೆ ಮಾಡಿದ ಬಳಿಕ ಧಾರವಾಡದ ಆರತಿ ಕ್ರಾಫ್ಟ್ನಲ್ಲಿ ಸೀರೆಗೆ ಕಸೂತಿ ಮಾಡಲಾಗಿತ್ತು. ನಿರ್ಮಲಾ ಸೀತಾರಾಮನ್ ಮರೂನ್ ಕಲರ್ ಮತ್ತು ಬ್ಲೂ ಕಲರ್ ಸೀರೆ ಆಯ್ಕೆ ಮಾಡಿಕೊಂಡಿದ್ದರು.