

ಮಳೆಗಾಲದ ಚಟಪಟ ಸದ್ದಿಗೆ ಬಾಯಿ ಚಪ್ಪರಿಸಬೇಕೆಂದು ಅನಿಸುವುದು ಸಾಮಾನ್ಯ. ವಿಶೇಷವಾಗಿ ಮಳೆಗಾಲದಲ್ಲಿ ಬೀದಿಬದಿಯ ತಿಂಡಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಆದರೂ ಮಾನ್ಸೂನ್ ಚಳಿಯಲ್ಲಿ ರಸ್ತೆ ಬದಿಯಲ್ಲಿ ಸಿಗುವ ಬಿಸಿ ಜೋಳದ ರುಚಿ ನೋಡಬೇಕು ಅನಿಸುತ್ತಿರುತ್ತದೆ. ಆದರೆ ಇದರಿಂದ ಅನಾರೋಗ್ಯಕ್ಕೀಡಾಗುತ್ತೀರಿ ಎಂದರೆ ನಂಬುವಿರಾ?


ರಸ್ತೆ ಬದಿಯ ತಿಂಡಿತಿನಿಸುಗಳು ಸದಾ ತೆರೆದಿರುತ್ತದೆ. ಅದರಲ್ಲೂ ಜೋಳವನ್ನು ಬೇಯಿಸಲು ಗಾಳಿ ಬೀಸುತ್ತಾ ಇರುತ್ತಾರೆ. ಮಾನ್ಸೂನ್ ಗಾಳಿಯಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಾಗಿರುವುದರಿಂದ ಇದು ಜೋಳದೊಂದಿಗೆ ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ.


ಅಲ್ಲದೆ ಬೀದಿ ಬದಿಯಲ್ಲಿ ಸಿಗುವ ಜೋಳಗಳಲ್ಲಿ ಬ್ಯಾಕ್ಟೀರಿಯಾ ಸೇರಿದಂತೆ ಹಲವಾರು ಸೂಕ್ಷ್ಮ ರೋಗಾಣುಗಳು ಕುಳಿತಿರುತ್ತದೆ. ಇದನ್ನು ತಿನ್ನುವುದರಿಂದ ಅನಾರೋಗ್ಯ ಉಂಟಾಗಬಹುದು.


ಮಳೆಗಾಲದಲ್ಲಿ ಗಾಳಿ ಹೆಚ್ಚಾಗಿರುವುದರಿಂದ ಜೋಳಕ್ಕೆ ಬಳಸುವ ಉಪ್ಪು ಮತ್ತು ನಿಂಬೆಯಲ್ಲಿ ಧೂಳಿನ ಕಣಗಳು ಸೇರಿರುತ್ತದೆ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು.


ಜೋಳವನ್ನು ಬೇಯಿಸಲು ಯಾವ ನೀರನ್ನು ಬಳಸಲಾಗಿದೆ ಎಂಬುದು ಕೂಡ ತಿಳಿದಿರುವುದಿಲ್ಲ. ಮಳೆಗಾಲದಲ್ಲಿ ಛಾವಣಿಯಿಂದ ಹಿಡಿದ ನೀರಿನಲ್ಲೂ ಅನೇಕ ರೋಗಾಣುಗಳಿರುತ್ತದೆ. ಇಂತಹ ಕಲುಷಿತ ನೀರಿನಿಂದ ಬೇಯಿಸಿದ ಜೋಳ ತಿನ್ನುವುದರಿಂದ ಅನೇಕ ರೋಗಗಳು ಉಂಟಾಗುತ್ತದೆ.