

ಜೀವನಶೈಲಿ ಮತ್ತು ಆಹಾರ ಕ್ರಮಗಳಿಂದ ಇಂದು ಮಧುಮೇಹದ(ಡಯಾಬಿಟೀಸ್) ಸಮಸ್ಯೆ ಎಲ್ಲರಲ್ಲೂ ಕಾಣಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವ ಸಂಖ್ಯೆ 3 ಕೋಟಿ ದಾಟಿದೆ. ಇದು 2030ರ ವೇಳೆಗೆ 8 ಕೋಟಿಯ ಹತ್ತಿರವಾಗಲಿದೆ ಎಂದು ಎಚ್ಚರಿಸಿದ್ದಾರೆ.


ಡಯಾಬಿಟೀಸ್ ಸಮಸ್ಯೆಯನ್ನು ಆರಂಭದಲ್ಲೇ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿ ಹೆಚ್ಚಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾದೀತು.


ವ್ಯಾಯಾಮ ಮಾಡುವುದರಿಂದ ಮತ್ತು ಆಹಾರ ಪದ್ದತಿಯನ್ನು ಬದಲಿಸಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಿಕೊಳ್ಳಬಹುದು. ಹಾಗೆಯೇ ಕೆಲ ಮನೆಮದ್ದುಗಳನ್ನು ತೆಗೆದುಕೊಳ್ಳುವುದರಿಂದಲೂ ಡಯಾಬಿಟೀಸ್ಗೆ ಪರಿಹಾರ ಕಂಡುಕೊಳ್ಳಬಹುದು.


ಹಾಗಲಕಾಯಿ ಜ್ಯೂಸ್- ಈ ಜ್ಯೂಸ್ ಆರೋಗ್ಯಕ್ಕೆ ಉತ್ತಮ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿಕೊಳ್ಳಬಹುದು. ಅಲ್ಲದೆ ಹಾಗಲಕಾಯಿಯು ದೇಹದ ಇನ್ಸುಲಿನ್ನ್ನು ಸಕ್ರೀಯಗೊಳಿಸುತ್ತದೆ.


ಮೆಂತ್ಯೆ ನೀರು- ಮನೆಯಲ್ಲೇ ತಯಾರಿಸಬಹುದಾದ ಮೆಂತ್ಯೆ ನೀರಿನಿಂದ ಕೂಡ ಮಧುಮೇಹವನ್ನು ನಿಯಂತ್ರಿಸಬಹುದು. ರಾತ್ರಿ ಮಲಗುವ ಮುನ್ನ ನೀರಿನಲ್ಲಿ 10 ಗ್ರಾಂ ಮೆಂತ್ಯೆ ಬೀಜಗಳನ್ನು ನೆನೆಸಿಡಿ. ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಡಯಾಬಿಟೀಸ್ ಕಡಿಮೆಯಾಗುತ್ತದೆ. ಅದರಲ್ಲೂ ಟೈಪ್2 ಡಯಾಬಿಟೀಸ್ ಸಮಸ್ಯೆ ನಿಯಂತ್ರಿಸಲು ಮೆಂತ್ಯೆ ನೀರು ಅತ್ಯುತ್ತಮ ಮನೆಮದ್ದು.


ಬಾರ್ಲಿ ನೀರು- ಬಾರ್ಲಿಯಲ್ಲಿರುವ ಫೈಬರ್ ಅಂಶವು ಮಧುಮೇಹ ರೋಗಿಗಳಿಗೆ ಬಹಳ ಅನುಕೂಲಕರವಾಗಿದೆ. ಇದರಲ್ಲಿ ಅಂಟಿ-ಆ್ಯಕ್ಸಿಡೆಂಟ್ ಅಂಶ ಅಧಿಕ ಪ್ರಮಾಣದಲ್ಲಿದ್ದು, ಇದು ರಕ್ತದ ಗ್ಲೂಕೋಸ್ನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಡಯಾಬಿಟೀಸ್ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.