Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

ಫೋನ್ ಕಳೆದು ಹೋದ್ರೆ ಅದನ್ನು ಹುಡುಕೋದು ಬಹಳ ಕಷ್ಟ. ನಾವು ಪೊಲೀಸ್ ಕಂಪ್ಲೇಂಟ್ ಕೊಟ್ಟರೂ ಸಹ ಸಿಗುವುದು ಬಹಳ ವಿರಳ. ಆದರೆ ಇನ್ಮುಂದೆ ಮೊಬೈಲ್ ಕಳೆದುಕೊಂಡರೆ ಚಿಂತೆ ಮಾಡಬೇಕಿಲ್ಲ. ಕಳೆದುಕೊಂಡ ಮೊಬೈಲ್ ವಾಪಾಸ್ ಪಡೆದುಕೊಳ್ಳಲು ಗದಗ ಪೊಲೀಸರು ಹೊಸ ಪ್ಲ್ಯಾನ್ ಮಾಡಿದ್ದಾರೆ. ಏನದು ಪ್ಲ್ಯಾನ್ ಇಲ್ಲಿದೆ ನೋಡಿ.

  • Local18
  • |
  •   | Gadag, India
First published:

  • 17

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ಫೋನ್ ಕಳೆದು ಹೋಯ್ತು ಎಂದರೆ ನಮಗೆ ಚಿಂತೆ ಆಗುತ್ತದೆ. ಏನು ಮಾಡಬೇಕು ಎಂಬುದರ ಬಗ್ಗೆ ತಲೆ ಓಡುವುದಿಲ್ಲ. ಹೇಗೆ ಸಾಧ್ಯವೋ ಹಾಗೆ ಹುಡುಕಲು ಪ್ರಯತ್ನ ಮಾಡುತ್ತೇವೆ. ಆದರೆ ನಿಮ್ಮ 1 ಮೆಸೇಜ್ ಕಳೆದು ಹೋದ ಮೊಬೈಲ್ ವಾಪಾಸ್ ಪಡೆಯಲು ಸಹಾಯ ಮಾಡುತ್ತದೆ.

    MORE
    GALLERIES

  • 27

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ಹೌದು, ಈ ರೀತಿ ಮೊಬೈಲ್ ಪಡೆದುಕೊಂಡ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತಾಂತ್ರಿಕ ವ್ಯವಸ್ಥೆಯನ್ನು ಹುಡುಕಿದ್ದು, ಈ ಬಗ್ಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಸಂಪೂರ್ಣ ಮಾಹಿತಿ ನೀಡಿದ್ದಾರೆ.

    MORE
    GALLERIES

  • 37

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ಪೊಲೀಸ್ ಇಲಾಖೆ ಮೊಬೈಫೈ ಎಂಬ ಹೊಸ ಆ್ಯಪ್ ಸಿದ್ಧ ಮಾಡಿದ್ದು, ಇದರ ಮೂಲಕ ಕಳೆದು ಹೋದ ಮೊಬೈಲ್ ಅನ್ನು ಸುಲಭವಾಗಿ ಪತ್ತೆ ಮಾಡಬಹುದು. ಆದರೆ ಇದಕ್ಕೆ ಕೆಲ ನಿಯಮಗಳಿದೆ. ಹೌದು, ಈ ತಂತ್ರಜ್ಞಾನದ ಮೂಲಕ ಮೊಬೈಲ್ ಮರಳಿ ಪಡೆಯಲು ಕೆಲವು ಪ್ರಕ್ರಿಯೆಗಳಿದ್ದು, ಅದನ್ನು ಭರ್ತಿ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 47

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ನಾವೆಲ್ಲರೂ ಮೊಬೈಲ್ ಕಳೆದು ಹೋದ ತಕ್ಷಣ ಸಾಮಾನ್ಯವಾಗಿ ಪೊಲೀಸ್ ಸ್ಟೇಷನ್ ಹೋಗುತ್ತೇವೆ. ಆದರೆ ಈಗ ಅದರ ಅವಶ್ಯಕತೆ ಇಲ್ಲ. ನೀವು ಇವರು ಜಾಗದಿಂದ ಕೇವಲ ಸಣ್ಣ ಮಾಹಿತಿಯನ್ನು ನೀಡಿದರೆ ಸಾಕು. ಹೌದು, ನೀವು ಕೊಡುವ ಮಾಹಿತಿ ಮೂಲಕ ಪೊಲೀಸರು ನಿಮ್ಮ ಮೊಬೈಲ್ ಹುಡುಕಿ ಕೊಡುತ್ತಾರೆ.

    MORE
    GALLERIES

  • 57

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ನೀವು ಮಾಡಬೇಕಿರುವುದೇನು? ಮೊಬೈಲ್ ಕಳೆದು ಹೋದ ತಕ್ಷಣ ನೀವು ಬೇರೆಯವರ ಫೋನ್ ತೆಗೆದುಕೊಂದು ಪೊಲೀಸ್ ಇಲಾಖೆಯ 8277969900 ಈ ನಂಬರ್ಗೆ Hi ಎಂದು ಮೆಸೇಜ್ ಮಾಡಬೇಕು. ಇದು ಇಲಾಖೆಯ ಸಿಬ್ಬಂದಿಗಳಿಗೆ ತಲುಪಿದ ತಕ್ಷಣ, ನಿಮ್ಮ ಕೈನಲ್ಲಿರುವ ಮೊಬೈಲ್ ವಾಟ್ಸಪ್ಗೆ ಒಂದು ಲಿಂಕ್ ಬರುತ್ತದೆ. ಆ ಲಿಂಕ್ ಓಪನ್ ಮಾಡಿ, ಕೆಲ ಮುಖ್ಯ ಮಾಹಿತಿಗಳನ್ನು ಭರ್ತಿ ಮಾಡಿದರೆ ಸಾಕು. ಮೊಬೈಲ್ ಕಳೆದು ಹೋದ ದೂರು ದಾಖಲಾಗುತ್ತದೆ.

    MORE
    GALLERIES

  • 67

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ಈ ದೂರು ಪ್ರಕಾರ ಕಳೆದುಹೋದ ಮೊಬೈಲ್ ಅನ್ನು ಕೆಲ ಪ್ಲ್ಯಾನ್ ಮೂಲಕ ಹುಡುಕಲಾಗುತ್ತದೆ. ಆಕಸ್ಮಿಕವಾಗಿ ಆ ಫೋನ್ ಪತ್ತೆಯಾಗದಿದ್ದಲ್ಲಿ ಕಳೆದು ಹೋದ ಫೋನ್ ಅನ್ನು ಬ್ಲಾಕ್ ಮಾಡಲಾಗುತ್ತದೆ. ಒಟ್ಟಿನಲ್ಲಿ ಫೋನ್ನಲ್ಲಿ ಡೇಟಾಗಳ ದುರ್ಬಳಕೆ ತಡೆಯಲಾಗುತ್ತದೆ.

    MORE
    GALLERIES

  • 77

    Stolen Phone: Hi ಅಂತ ಮೆಸೇಜ್ ಮಾಡಿದ್ರೆ ಸಿಗುತ್ತೆ ಕಳೆದು ಹೋದ ಫೋನ್

    ಇನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಗದಗ ಪೊಲೀಸರು ಈ ಹೊಸ ಪ್ರಯೋಗ ಆರಂಭಿಸಿದ್ದು, ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸಹ ಇಲಾಖೆ ಹೊಸ ಹೊಸ ಯೋಜನೆ ಜಾರಿಗೆ ತರುತ್ತಿದೆ. ಸಾರ್ವಜನಿಕರಿಗೆ ಸಹಾಯವಾಗುವ ಈ ಹೊಸ ಪ್ರಯೋಗಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    MORE
    GALLERIES