Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಲ್ಲಿ ಸಿಹಿಕಹಿ ಚಂದ್ರು ಅವರು ಶಂಕರ್​ನಾಗ್ ಅವರ ಮನೆ ಕಟ್ಟುವ ಐಡಿಯಾ ಬಿಚ್ಚಿಟ್ಟಿದ್ದಾರೆ. ಜೊತೆಗೆ ಬಡವರಿಗೆ ಶಂಕರ್ ಹೃದಯ ಹೇಗೆ ಮಿಡಿಯುತ್ತಿತ್ತು ಅಂತಾನೂ ಹೇಳಿದ್ದಾರೆ.

First published:

  • 18

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 9 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ವಾರ ಶನಿವಾರದ ಸಂಚಿಕೆಗೆ ಸಿಹಿಕಹಿ ಚಂದ್ರು ಅವರು ಬಂದಿದ್ದರು. ಅವರು ತಮ್ಮ ಜೀವನದ ಕತೆಯನ್ನು ಹೇಳಿಕೊಂಡಿದ್ದಾರೆ. ಶಂಕರ್ ನಾಗ್ ಅವರ ಸಂಕೇತ್ ತಂಡದಲ್ಲೂ ಕೂಡ ಇವರು ಕೆಲಸ ಮಾಡಿದ್ದಾರೆ.

    MORE
    GALLERIES

  • 28

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ಸಿಹಿಕಹಿ ಚಂದ್ರು ಅವರಿಗೆ ಶಂಕರ್ ನಾಗ್ ಕಾಲೇಜು ದಿನಗಳಿಂದಲೇ ಪರಿಚಯವಂತೆ. ಚಂದ್ರು ಅವರು ಕಾಲೇಜ್ ಪ್ರೆಸಿಡೆಂಟ್ ಆಗಿದ್ದಾಗ ಶಂಕರ್ ನಾಗ್ ಅವರನ್ನು ಕಾಲೇಜಿಗೆ ಅತಿಥಿಯಾಗಿ ಆಹ್ವಾನಿಸಲು ಹೋಗಿದ್ದೆ ಎಂದು ಹೇಳಿದ್ದಾರೆ

    MORE
    GALLERIES

  • 38

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ತಮ್ಮ ಗುರುಗಳ ನೆರವಿನಿಂದ ನೋಡಿಸ್ವಾಮಿ ನಾವಿರೋದೆ ಹೀಗೆ ನಾಟಕದ ರಿಹರ್ಸಲ್‍ಗೆ ಹೋಗ್ತಿದ್ದೆ. ಆ ಬಳಿಕ ಅಲ್ಲಿ ಶಂಕರ್ ನಾಗ್ ಅವರು ನನ್ನನ್ನು ಗುರುತಿಸಿ ಮಾಲ್ಗುಡಿ ಡೇಸ್ ತಂಡಕ್ಕೆ ಸೇರಿಸಿಕೊಂಡರು ಎಂದು ಚಂದ್ರು ಅವರು ಹೇಳಿದ್ದಾರೆ.

    MORE
    GALLERIES

  • 48

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ಶಂಕರ್​ನಾಗ್ ಅವರ ಜೊತೆ ಸಿನಿಮಾ ಮಾಡುವ ಅವಕಾಶವೂ ದೊರೆಯಿತು. 'ಒಮ್ಮೆ ಅವರೊಟ್ಟಿಗೆ ನರಸಿಂಹ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದೆ. ಇಬ್ಬರಿಗೂ ಸ್ವಲ್ಪ ಬಿಡುವಿತ್ತು ಕೂಡಲೇ ಬಾರೋ ಹೊಸ ಮನೆ ಕಟ್ಟಿಸಿದ್ದೀನಿ ನಿನಗೆ ತೋರಿಸುತ್ತೀನಿ ಎಂದು ಅವರ ಮೆಟೊಡೋರ್‍ನಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋದರು' ಎಂದು ಚಂದ್ರು ಅವರು ನೆನೆಪು ಮಾಡಿಕೊಂಡಿದ್ದಾರೆ.

    MORE
    GALLERIES

  • 58

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ಆಗ ಶಂಕರ್​ನಾಗ್ ಅವರು ದೊಡ್ಡ ನಟರಾಗಿ ಬೆಳೆದಿದ್ರು. ಯಾವುದೋ ದೊಡ್ಡ ಮನೆ ಕಟ್ಟಿದ್ದಾರೆ ಎಂದುಕೊಂಡು ಹೋಗಿ ನೋಡಿದರೆ, ಅಲ್ಲಿ ಸಣ್ಣ ಮನೆ ಇತ್ತು. ಒಂದು ಕೋಣೆಯ ಸರಳವಾದ ಮನೆ ನನಗೆ ಆಶ್ಚರ್ಯವಾಯಿತು ಎಂದು ಸಿಹಿಕಹಿ ಚಂದ್ರು ಅವರು ಹೇಳಿದ್ದಾರೆ.

    MORE
    GALLERIES

  • 68

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ಶಂಕರ್​ನಾಗ್ ಈ ರೀತಿ ಹೇಳಿದ್ರಂತೆ. 'ಈ ಮನೆಯನ್ನು ಬರೀ ಎರಡು ದಿನದಲ್ಲಿ ಕಟ್ಟಿದ್ದೀವಿ, ರೆಡಿಮೇಡ್ ಬ್ಲಾಕ್‌ಗಳನ್ನು ಬಳಸಿ ಕಟ್ಟಿರುವ ಮನೆ ಇದು. ಬ್ಲಾಕ್‍ಗಳನ್ನು ಇಟ್ಟು ರೂಫಿಂಗ್, ಫ್ಲೋರಿಂಗ್ ಹಾಕಿದರೆ ಮುಗಿಯಿತು. ಇದು ಜರ್ಮನಿಯ ತಂತ್ರಜ್ಞಾನ.

    MORE
    GALLERIES

  • 78

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    ಜರ್ಮನಿಯ ತಂತ್ರಜ್ಞಾನದ ಮನೆ ಕಟ್ಟಲು ಖರ್ಚಾಗಿರುವುದು ಹದಿನೈದು ಸಾವಿರ ರೂಪಾಯಿ ಅಷ್ಟೆ. ಇಂಥಹಾ ಸರಳ ಮನೆಯನ್ನು ರಾಜ್ಯದ ಎಲ್ಲಕಡೆ ಕಟ್ಟಿಸಬೇಕು ಅಂದುಕೊಂಡಿದ್ದೇನೆ.' ಎಂದಿದ್ರಂತೆ.

    MORE
    GALLERIES

  • 88

    Weekend With Ramesh: ಶಂಕರ್​ನಾಗ್ ಇದ್ದಿದ್ರೆ ಬಡವರಿಗೆ ಹೇಗೆ ಸಹಾಯ ಮಾಡ್ತಿದ್ರು? ಕರಾಟೆ ಕಿಂಗ್ ಹೃದಯವಂತಿಕೆ ಬಗ್ಗೆ ಸಿಹಿಕಹಿ ಚಂದ್ರು ಮಾತು

    'ಈ ತಂತ್ರಜ್ಞಾನ ಬಳಸಿ ಮನೆ ಕಟ್ಟಿಸಿದರೆ ರಾಜ್ಯದಲ್ಲಿರುವ ಸ್ಲಂಗಳೆಲ್ಲ ನಿರ್ಮೂಲನೆ ಆಗುತ್ತವೆ, ಗುಡಿಸಲು ವಾಸ ಎಂಬುದೇ ಇರಲ್ಲ. ಈ ಮನೆ ಕಟ್ಟಿಸಲು ಸರ್ಕಾರದಿಂದ ಹತ್ತುಸಾವಿರ ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತಿದ್ದೀನಿ' ಎಂದು ಶಂಕರ್ ನಾಗ್ ಹೇಳಿದ್ರು ಎಂದು ಸಿಹಿಕಹಿ ಚಂದ್ರು ಅವರು ನೆನೆಪು ಮಾಡಿಕೊಂಡಿದ್ದಾರೆ.

    MORE
    GALLERIES