ಇದೇ ಮಾರ್ಚ್ 25ರಿಂದ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶುರುವಾಗಲಿದೆ. ಈ ಬಾರಿಯ ಗೆಸ್ಟ್ ಗಳು ಯಾರು ಎಂದು ನಿರೂಪಕ ರಮೇಶ್ ಅರವಿಂದ್ ತಿಳಿಸಿದ್ದಾರೆ.
2/ 8
ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ಇದಾಗಿದ್ದು, ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಪತ್ರಿಕಾಗೋಷ್ಠಿ ಮಾಡಿದ್ದಾರೆ.
3/ 8
ಮೊದಲ ಸಂಚಿಕೆಯಲ್ಲಿ ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇವತ್ತು ರಮ್ಯಾ ಅವರ ಶೂಟಿಂಗ್ ನಡೆಯಲಿದೆ ಎಂದು ರಮೇಶ್ ಅರವಿಂದ್ ಮಾಹಿತಿ ನೀಡಿದ್ದಾರೆ.
4/ 8
ಎರಡನೇ ಎಪಿಸೋಡ್ ನಲ್ಲಿ ಡ್ಯಾನ್ಸರ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಭುದೇವ್ ಅವರ ಲೈಫ್ ಜರ್ನಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
5/ 8
ಈ ಬಾರಿಯ ಸೀಸನ್ ನಲ್ಲಿ ಧ್ರುವ ಸರ್ಜಾ ಸಹ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ನಟನ ಜೀವನದ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ರೆಡಿಯಾಗಿದ್ದಾರೆ.
6/ 8
ಹಿರಿಯ ನಟಿ ಮಾಲಾಶ್ರಿ ಅವರು ಸಹ ಈ ಬಾರಿ ಸಾಧಕರ ಸೀಟ್‍ನಲ್ಲಿ ಕೂರಲಿದ್ದಾರೆ. ಆಗ ಹೀರೋಗಳಿಗೆ ಸೆಡ್ಡು ಹೊಡೆದು ನಾಯಕಿಯಾಗಿ ಮಿಂಚಿದ್ದವರು ಇವರು.
7/ 8
ಡಿಂಪಲ್ ಕ್ವೀನ್ ರಂಚಿತಾ ರಾಮ್ ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಲಿದ್ದಾರೆ. ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು ಜನ ಕಾಯ್ತಾ ಇದ್ದಾರೆ.
8/ 8
ಈ ಬಾರಿಯ ವಿಶೇಷವೆಂದರೆ 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್‍ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್‍ಗೆ ಬರುವ ಅತಿಥಿ ಆ ಚೇರ್ ಗೆ ನ್ಯಾಯ ಕೊಡಲಿದ್ದಾರೆ ಎಂದಿದ್ದಾರೆ ನಟ ರಮೇಶ್.
First published:
18
Weekend with Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಗೆಸ್ಟ್ಗಳು ಇವರೇ!