ಜೀ ಕನ್ನಡದಲ್ಲಿ ಭಾನುವಾರ ಮತ್ತು ಶನಿವಾರ ರಾತ್ರಿ 09 ಗಂಟೆಗೆ ವೀಕೆಂಡ್ ವಿತ್ ರಮೇಶ್ ಸೀಸನ್ ಕಾರ್ಯಕ್ರಮ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮವನ್ನು ರಮೇಶ್ ಅರವಿಂದ್ ಅವರು ನಡೆಸಿಕೊಡ್ತಾರೆ.ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಸಾವಿರಾರು ಕವಿತೆಗಳನ್ನು, ಚಲನಚಿತ್ರ ಹಾಡುಗಳನ್ನು ಬರೆದ ಕನ್ನಡ ನಾಡಿನ ಹೆಮ್ಮೆಯ ಸಾಹಿತಿ ಡಾ.ನಾಗೇಂದ್ರ ಪ್ರಸಾದ್ ಅವರು ಬಂದಿದ್ದಾರೆ. ಅವರ ಜೀವನದ ಕತೆ ಹೇಳಿದ್ದಾರೆ.
ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿನ 1000 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ನಾಗೇಂದ್ರ ಪ್ರಸಾದ್, 'ಸತ್ಯ' ಚಿತ್ರದ 'ಹುಟ್ಟು ಎರಡಕ್ಷರ' ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದವರು. ದೀಪಕ್ ನಟನೆಯ 'ಶಿಷ್ಯ' ಹಾಗೂ 'ಅಂಬಿ' ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ನಲ್ಲ' ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸೂಪರ್ ಹಿಟ್ 'ಶ್ರೀ ಮಂಜುನಾಥ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.