Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಲ್ಲಿ ಡಾ. ಮಂಜುನಾಥ್ ಅವರು ಅತಿಥಿಯಾಗಿ ಬಂದಿದ್ದರು. ಜನರ ಪಾಲಿಗೆ ದೇವರಾದ ಹೃದಯ ತಜ್ಞ ಡಾ.ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ ಇದು.

First published:

 • 18

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರು ಅತಿಥಿಯಾಗಿ ಬಂದಿದ್ದರು. ಜಯದೇವದಲ್ಲಿದ್ದ 25 ಲಕ್ಷ ರುಪಾಯಿಗಳ ಬಡರೋಗಿಗಳ ಸಹಾಯಧನ ಇಂದು 110 ಕೋಟಿಗೆ ಹೆಚ್ಚಾಗುವಂತೆ ಮಾಡಿದ್ದಾರೆ.

  MORE
  GALLERIES

 • 28

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ಮಂಜುನಾಥ್ ಅವರು ತಮ್ಮದೇ ಆದ ಸರಳ ಹೃದಯ ಶಸ್ತ್ರಚಿಕಿತ್ಸೆ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ ನೀಡ್ತಾರೆ. ಸಂಸ್ಥೆಯಿಂದ 50ಲಕ್ಷಕ್ಕೂ ಹೆಚ್ಚು ಹೃದ್ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

  MORE
  GALLERIES

 • 38

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ಮಂಜುನಾಥ್ ಅವರು 6 ಲಕ್ಷಕ್ಕೂ ಹೆಚ್ಚು ಹೃದಯ ಶಸ್ತ್ರ ಚಿಕಿತ್ಸೆಗಳ ಉಸ್ತುವರಿಯನ್ನು ವಹಿಸಿದ್ದಾರೆ. 5,27,437 ಹೊರ ರೋಗಿಗಳನ್ನು ನೋಡಿದ್ದಾರೆ. 53,806 ರಲ್ಲಿ - 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ.

  MORE
  GALLERIES

 • 48

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ಮಂಜುನಾಥ್ ಅವರು ವೈಯಕ್ತಿಕವಾಗಿ 54 ಸಾವಿರ ಹೃದಯ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಅಲ್ಲದೇ, 15,000 ಆಂಜಿಯೋಪ್ಲ್ಯಾಸ್ಟಿಗಳು (ದೇಶದಲ್ಲಿ ಅತಿ ಹೆಚ್ಚು ಪ್ರಮಾಣ),3,000 ಬೈಪಾಸ್ ಮತ್ತು ವಾಲ್ವ್ ರಿಪ್ಲೇಸ್‍ಮೆಂಟ್ ಸರ್ಜರಿಗಳು. 3,00,054 ಎಕೋ - ಕಾರ್ಡಿಯೋಗ್ರಾಮ್‍ಗಳು (ಜಗತ್ತಿನಲ್ಲಿ ಅತಿ ಹೆಚ್ಚು). ಬಡ ರೋಗಿಗಳ ಕಾರ್ಪಸ್ ನಿಧಿಯ ರಚನೆ ರೂ. ವಿವಿಧೆಡೆಯಿಂದ 100 ಕೋಟಿ ರೂಪಾಯಿ ಸಹಾಯ ಮಾಡಿದ್ದಾರೆ.

  MORE
  GALLERIES

 • 58

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ಡಾ.ಸಿ.ಎನ್. ಮಂಜುನಾಥ್ ಅವರಿಗೆ ದೊರೆತ ಪ್ರಶಸ್ತಿಗಳು- ಡಾ. ಮಂಜುನಾಥ್‍ರವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ಕಾಟ್ಲೆಂಡ್‍ನ ರಾಯಲ್ ಕಾಲೇಜ್ ಫಿಜಿಷಿಯನ್ಸ್ ನ ಫೆಲೋಶಿಪ್‍ಗೆ ಇವರು ಭಾಜನರಾಗಿದ್ದಾರೆ.

  MORE
  GALLERIES

 • 68

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರ ಅಪ್ರತಿಮ ಸೇವೆಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಗೌರವ ಸಂದಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಷಿಯಾ ಫೆಸಿಫಿಕ್ ವ್ಯಾಸ್ಕ್ಯೂಲರ್ ಸಮಾವೇಶದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ದೊರೆತಿದೆ.

  MORE
  GALLERIES

 • 78

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  ಕೇವಲ 5 ದಿನಗಳಲ್ಲಿ 200 ಆಂಜಿಯೋಪ್ಲ್ಯಾಸ್ಟಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ (ದೇಶದಲ್ಲಿ ಅತಿ ಹೆಚ್ಚು). 24,447 ಆಂಜಿಯೋಗ್ರಾಮ್‍ಗಳು. 1500 ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಗಳು (ಜಗತ್ತಿನಲ್ಲಿ ಅತಿ ಹೆಚ್ಚು) ಮಾಡಿದ್ದಾರೆ.

  MORE
  GALLERIES

 • 88

  Weekend with Ramesh: ಡಾ ಮಂಜುನಾಥ್ ಅವರ ಯಶಸ್ಸಿನ ಪಯಣದ ನೋಟ; ಜನರ ಪಾಲಿಗೆ ದೇವರಾದ ಹೃದಯ ತಜ್ಞರು

  17 ವರ್ಷಗಳಿಂದ ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಇವರಿಂದ ಅದೆಷ್ಟೋ ಬಡ ರೋಗಿಗಳು ಸಹಾಯ ಪಡೆದಿದ್ದಾರೆ. ಇವರನ್ನೇ ದೇವರು ಎಂದು ಪೂಜಿಸುತ್ತಾರೆ.

  MORE
  GALLERIES