ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಕಾರ್ಯಕ್ರಮಗಳ ಮೂಲಕ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ.
2/ 8
ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಗೆ ಸೂಪರ್ ಕ್ವೀನ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಜಾ ಟಾಕೀಸ್ ಖ್ಯಾತಿಯ ರೆಮೋ ಭಾಗವಹಿಸಿದ್ದಾರೆ.
3/ 8
ಈ ವಾರ ವಿಭಿನ್ನ ವೇಷಗಳನ್ನು ಹಾಕಿಕೊಂಡು ಸ್ಪರ್ಧೆ ಮಾಡಬೇಕಾಗಿದೆ. ಅದಕ್ಕಾಗಿ ರೆಮೋ ಭಸ್ಮಾಸುರನ ರೀತಿ ಗೆಟ್ ಅಪ್ ಹಾಕಿ ಮಿಂಚಿದ್ದಾರೆ. ಇವರು ಅವರೇನಾ ಎನ್ನುವಷ್ಟು ಅದ್ಭುತವಾಗಿ ಕಾಣ್ತಾ ಇದ್ದಾರೆ.
4/ 8
ರೆಮೋ ಈ ವೇಷ ಹಾಕಿ ವಿಲನ್ ಚಿತ್ರದ ರಾವಣ ಹಾಡಿಗೆ ಸಖತ್ ಆಗಿ ರೀಲ್ಸ್ ಮಾಡಿದ್ದಾರೆ. ರೀಲ್ಸ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸೂಪರ್ ಲುಕ್ ಎಂದಿದ್ದಾರೆ.
5/ 8
ಸೂಪರ್ ಕ್ವೀನ್ ಕಾರ್ಯಕ್ರಮವನ್ನು ಹೆಣ್ಣು ಮಕ್ಕಳಿಗಾಗಿ ಶುರು ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳು ಸ್ಟ್ರಾಂಗ್ ಎನ್ನುವುದನ್ನು ತೋರಿಸಿ ಕೊಡಲಾಗುತ್ತೆ.
6/ 8
ಕಾರ್ಯಕ್ರಮದ ಜಡ್ಜ್ ಗಳಾಗಿ ನಟ ವಿಜಯ ರಾಘವೇಂದ್ರ, ನಟಿ ರಚಿತ್ ರಾಮ್ ಇದ್ದಾರೆ. ನಿರೂಪಕರಾಗಿ ಕುರಿ ಪ್ರತಾಪ್, ಶ್ವೇತಾ ಚೆಂಗಪ್ಪ ಇದ್ದಾರೆ. ಸ್ಪರ್ಧಿಗಳಾಗಿ ಸೀರಿಯಲ್ ಕಲಾವಿದರು, ಗಾಯಕರು ಎಂಟ್ರಿ ಆಗಿದ್ದಾರೆ.
7/ 8
ರೆಮೋ ಅವರು ಪ್ರೀತಿಸಿದ್ದು ಡಿವೋರ್ಸ್ ಆದ ಹುಡುಗನನ್ನು. ಮನೆಯವರ ವಿರೋಧ ಕಟ್ಟಿಕೊಂಡು ಅವರನ್ನು ಮದುವೆ ಆಗ್ತಾರೆ. ಅವರು ಇವರಿಗಿಂತ 13 ವರ್ಷ ದೊಡ್ಡವರಂತೆ. ರೆಮೋ ತುಂಬಾ ಇಷ್ಟ ಒಟ್ಟು ಮದುವೆ ಆಗಿದ್ದರು. ಆದ್ರೆ ಅವರು ಅಂದುಕೊಂಡಂತೆ ಪ್ರೀತಿ ಸಿಗಲಿಲ್ಲ. ಅವರನ್ನು ಮನೆಯಲ್ಲಿ ಮೂಲೆ ಗುಂಪು ಮಾಡಿಬಿಟ್ರಂತೆ.
8/ 8
ರೆಮೋ ಅವರಿಗೆ ಆ ಜೀವನ ಸಾಕಾಗಿ, 5 ವರ್ಷದ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಬಂದ್ರಂತೆ. ಆಗ ಅವರಿಗೆ ಒಂದು ರೂಪಾಯಿ ಸಹ ಇರಲಿಲ್ವಂತೆ. ಬಿಡದೇ ಹಗಲು ರಾತ್ರಿ ಎನ್ನದೇ, ಹಾಡು ಹೇಳಿ, ಜೀವನ ಕಟ್ಟಿಕೊಂಡ್ರಂತೆ.