ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ಸೂಪರ್ ಕ್ವೀನ್ ಎಂಬ ಹೊಸ ರಿಯಲಿಟಿ ಶೋ ಪ್ರಸಾರವಾಗ್ತ ಇದೆ. ಆ ಕಾರ್ಯಕ್ರಮದಲ್ಲಿ ನಟಿ ಗೀತಾ ಭಟ್ ಭಾಗವಹಿಸಿದ್ದಾರೆ.
2/ 8
ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಈ ಬಾರಿ ವಿಭಿನ್ ಗೆಟ್ ಅಪ್ ರೌಂಡ್ ಇದೆ. ಅದಕ್ಕೆ ಗೀತಾ ಅವರು ಯಕ್ಷಗಾನ ಮಾಡುತ್ತಿದ್ದು, ಅದರಲ್ಲಿ ವಿಷ್ಣುವಿನ ಪಾತ್ರ ಮಾಡ್ತಾ ಇದ್ದಾರೆ.
3/ 8
ಯಕ್ಷಗಾನದ ಪಾತ್ರದಲ್ಲಿ ವಿಷ್ಣು ಆಗಿರುವ ಗೀತಾ ಭಟ್ ಅದ್ಭುತವಾಗಿ ನಟನೆ ಮಾಡಿದ್ದಾರೆ. ಸುದರ್ಶನ ಚಕ್ರದ ಅಹಂಕಾರ ಇಳಿಸಿದ್ದಾರೆ. ಎಲ್ಲರ ಮನ ಗೆದ್ದಿದ್ದಾರೆ.
4/ 8
ಇದು ಜೀವಮಾನದ ಅನುಭವ. ಈ ಅವಕಾಶಕ್ಕಾಗಿ ಇಡೀ ತಂಡಕ್ಕೆ ಧನ್ಯವಾದಗಳು. ಭಾಗವತ, ಶಂಕರ್ ಬಾಳೆಕುದ್ರಿ ಜಿ ಅವರಿಂದ ಸಂಯೋಜನೆ ಮತ್ತು ತರಬೇತಿ ಪಡೆದಿದ್ದಾನೆ. ವಿಷ್ಣು ಆಶೀರ್ವಾದ ಎಂದು ಗೀತ್ ಭಟ್ ಪೋಸ್ಟ್ ಹಾಕಿಕೊಂಡಿದ್ದಾರೆ.
5/ 8
ಬ್ರಹ್ಮಗಂಟು ಧಾರಾವಾಹಿಯಲ್ಲಿ ಲಕ್ಕಿಯ ಮುದ್ದಿನ ಮಡದಿ ಪಾತ್ರ ಮಾಡಿದ್ದರು ಗುಂಡಮ್ಮ ಗೀತಾ. ಅವರು ಇರುವ ದಪ್ಪಕ್ಕೆ ಅವಳನ್ನು ಎಲ್ಲರೂ ಗುಂಡಮ್ಮ ಗುಂಡಮ್ಮ ಎಂದು ರೇಗಿಸುತ್ತಿದ್ದರು ಬೇಸರವಾಗಿತ್ತು ಎಂದು ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ತಮ್ಮ ಮನದ ಮಾತು ಹಂಚಿಕೊಂಡಿದ್ದರು.
6/ 8
ಅಲ್ಲದೇ ಗೀತಾ ಅವರು ಸತತವಾಗಿ ಡಯಟ್, ಜಿಮ್ ಮಾಡಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾರೆ. ಇನ್ನಷ್ಟು ತೂಕ ಇಳಿಸಿಕೊಳ್ಳುವ ಗುರಿ ಹೊಂದಿದ್ದಾರೆ.
7/ 8
ಕಳೆದ ಬಾರಿ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಅಮ್ಮಂದಿರಿ ಧನ್ಯವಾದ ಹೇಳೋ ರೌಂಡ್ ಇತ್ತು. ಆಗ ಗೀತಾ ತಮ್ಮ ಅಮ್ಮನಿಗಾಗಿ ಟ್ಯಾಟೋ ಹಾಕಿಸಿಕೊಂಡಿದ್ದರು.
8/ 8
ಗೀತಾ ಭಟ್ ಟ್ಯಾಟೂ ನೋಡಿ ಗೀತಾ ಅವರ ತಾಯಿ ತುಂಬಾ ಖುಷಿ ಆಗಿದ್ದಾರೆ. ಎಷ್ಟೊಂದು ನೋವಾದ್ರೂ ಟ್ಯಾಟೂ ಹಾಕಿಸಿಕೊಂಡಿದ್ದಾಳೆ ಎಂದು ಹೇಳಿದ್ದರು. ಗೀತಾ ಅವರಿಗೆ ತಮ್ಮ ಅಮ್ಮ ಎಷ್ಟು ಬೆಂಬಲವಾಗಿ ನಿಂತಿದ್ರು ಎಂದು ಹೇಳಿದ್ದರು.