ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಸಾರವಾಗ್ತಿದೆ. ಈ ಧಾರಾವಾಹಿ ಈಗಾಗಲೇ ಜನರ ಮನಸ್ಸು ಗೆದ್ದಿದೆ.
2/ 8
ಈ ಧಾರಾವಾಹಿಯಲ್ಲಿ ತುಳಸಿ ಪಾತ್ರವನ್ನು ಸುಧಾರಾಣಿ ಅವರು ಮಾಡ್ತಾ ಇದ್ದಾರೆ. ಇನ್ನು ಮಾಧವನ ಪಾತ್ರವನ್ನು ಅಜಿತ್ ಹಂದೆ ಅವರು ನಿರ್ವಹಿಸುತ್ತಿದ್ದಾರೆ. ಮಾಧವನಾಗಿ ಅಜಿತ್ ಅವರು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
3/ 8
ಮಾಧವ ಅಂದ್ರೆ ಅಡುಗೆ ಕಾರ್ಯಕ್ರಮ ನಡೆಸಿ ಕೊಡೋ ಪಾತ್ರ. ಅವರು ಮಾಡೋ ಅಡುಗೆ, ಅವರ ನೀತಿ ಪಾಠಗಳು ತುಳಸಿಗೆ ತುಂಬಾ ಇಷ್ಟ. ಅವರ ದೊಡ್ಡ ಅಭಿಮಾನಿ ತುಳಸಿ. ಅವರು ಹೇಳಿದ ಎಲ್ಲವನ್ನೂ ಒಂದು ನೋಟ್ ಬುಕ್ ನಲ್ಲಿ ಬರೆದಿಟ್ಟು ಕೊಳ್ತಾಳೆ.
4/ 8
ಮಾಧವ ಪಾತ್ರ ಆದಷ್ಟು ಬೇಗ ಜನರನ್ನು ಸೆಳೆದಿದೆ. ಎಲ್ಲಿ ಹೋದ್ರು ಜನ ನನ್ನ ಗುರುತಿಸುತ್ತಾರೆ. ಧಾರಾವಾಹಿಯಲ್ಲಿ ಇನ್ನೂ ಉತ್ತಮವಾಗಿ ನಟಿಸುವುದಾಗಿ ಅಜಿತ್ ಅವರು ಹೇಳಿದ್ದಾರೆ.
5/ 8
ಸಣ್ಣ ವಯಸ್ಸಿನಿಂದಲೂ ಅಜಿತ್ ಅವರಿಗೆ ನಾಟಕಗಳಲ್ಲಿ ಅಭಿನಯಿಸುವ ಆಸೆ ಇತ್ತಂತೆ. ಆಗ ಅವಕಾಶ ಸಿಕ್ಕಿರಲಿಲ್ವಂತೆ. ಆದ್ರೆ ಅದೇ ಆಸೆಯಿಂದ ಈ ಕ್ಷೇತ್ರಕ್ಕೆ ಬಂದು ಖುಷಿಯಾಗಿದ್ದಾರಂತೆ.
6/ 8
ನಾನು ನನ್ನ ವಯಸ್ಸಿಗಿಂತ ಹೆಚ್ಚು ವಯಸ್ಸಾಗಿರುವ ಪಾತ್ರವನ್ನು ಮಾಡುತ್ತಿದ್ದೇನೆ. ನನಗೆ 8 ವರ್ಷದ ಮಗನಿದ್ದಾನೆ. ನಾನು ಕೂದಲಿಗೆ ಬಣ್ಣ ಹಾಕದೇ ಇರುವ ಕಾರಣ, ಬಿಳಿ ಕೂದಲು ಮಾಧವನ ಪಾತ್ರಕ್ಕೆ ಮ್ಯಾಚ್ ಆಗಿದೆ ಎಂದು ಅಜಿತ್ ಹೇಳಿದ್ದಾರೆ.
7/ 8
16 ವರ್ಷದ ಹಿಂದೆ ಅಜಿತ್ ಅವರು ಗರ್ವ, ಬಿದಿಗೆ ಚಂದ್ರಮ, ಹಿಂದಿ ಧಾರಾವಾಹಿ ಚೋಟಿಮಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮುಕ್ತ ಧಾರಾವಾಹಿಯ ಸ್ವಾಮೀಜಿ ಪಾತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು, ಈಗ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
8/ 8
ಸದ್ಯ ಧಾರಾವಾಹಿಯಲ್ಲಿ ಸೊಸೆಯ ಮುದ್ದಿನ ಮಾವನಾಗಿ, ಮಗನ ವಿರೋಧ ಕಟ್ಟಿಕೊಂಡು, ಜನರ ಪ್ರೀತಿ ಗಳಿಸುತ್ತಿದ್ದಾರೆ. ಅಜಿತ್ ಅವರಿಗೆ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳಿದ್ದಾರೆ.