ಈ ಧಾರಾವಾಹಿ ಮಧ್ಯಮ ವರ್ಗದ ಭಾವನೆಗಳಿಗೆ ಕನ್ನಡಿ ಹಿಡಿಯುವುದರ ಜತೆಗೆ, ದೈನಂದಿನ ಬದುಕಿನಲ್ಲಿ ಎದುರಾಗುವ ಅನೇಕ ಗೊಂದಲ , ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನಮಾಡಲಿದೆ. ಮಧ್ಯಮ ವರ್ಗದ ಸೂಕ್ಷ್ಮ ಪ್ರಶ್ನೆಗಳಿಗೆ ಉತ್ತರ ನೀಡಲೆಂದೇ ಕಥಾನಾಯಕನ ಸ್ನೇಹಿತನಾಗಿ ಭಗವಂತ ಭೂಮಿಗೆ ಬಂದಿದ್ದಾನೆ.ಖ್ಯಾತ ನಟ, ನಿರ್ದೇಶಕ ನವೀನ್ ಕೃಷ್ಣ, ನಟಿ ಕೃತ್ತಿಕಾ, ಹಿರಿಯ ನಟ ಉಮೇಶ್, ಬಾಲ ಕಲಾವಿದರಾದ ಅಂಕಿತಾ, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಅನುರಾಗ್ ಮತ್ತು ಭಗವಂತನ ಪಾತ್ರದಲ್ಲಿ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ.