ಜೀ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗುತ್ತಿರುವ ಪಾರು ಸೀರಿಯಲ್ ಹಲವಾರು ಜನರ ಮನಸ್ಸು ಗೆದ್ದಿದೆ. ದಿನಕ್ಕೊಂದು ತಿರುವಿನೊಂದಿಗೆ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.
2/ 8
ಅಖಿಲಾಂಡೇಶ್ವರಿ ಮಕ್ಕಳಾಗಿ ಆದಿತ್ಯ, ಪ್ರೀತು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಬ್ಬರು ಅಮ್ಮನಿಗೆ ಬೆಂಬಲವಾಗಿ ನಿಂತು, ಕಂಪನಿ ನೋಡಿಕೊಂಡು ಹೋಗ್ತಾ ಇದ್ದಾರೆ.
3/ 8
ಪ್ರೀತು ಅಂದ್ರೆ ಸಿದ್ದು ಮೂಲಿಮನಿ ಮತ್ತು ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಪ್ರಿಯಾ ಆಚಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರೀತಿಸಿ ಮದುವೆ ಆಗಲು ರೆಡಿ ಆಗಿದ್ದಾರೆ.
4/ 8
ಪಾರು ಧಾರಾವಾಹಿಯ ನಟ ಆದಿತ್ಯ ಅಂದ್ರೆ ಶರತ್ ಪದ್ಮಾನಾಭ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶರತ್ ಪದ್ಮಾನಾಭ್ ಮದುವೆ ಆಗುತ್ತಿರುವ ಹುಡುಗಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
5/ 8
ಪಾರು ಧಾರಾವಾಹಿಯಲ್ಲಿ ಆದಿ, ಪಾರುಳನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ನಿಜ ಜೀವನದಲ್ಲೂ ನೆಚ್ಚಿನ ಗೆಳತಿ ಜೊತೆ ಮದುವೆ ಆಗುತ್ತಿದ್ದಾರೆ.
6/ 8
ಸತ್ಯ ಧಾರಾವಾಹಿಯ ಕಾರ್ತಿಕ್ ಅಂದ್ರೆ ಸಾಗರ್ ಬಿಳಿಗೌಡ, ಮಾಡೆಲ್ ಆಗಿರುವ ಸಿರಿ ರಾಜು ಜೊತೆ ತಮ್ಮ ಮುಂದಿನ ಪಯಣ ಶುರು ಮಾಡಲಿದ್ದಾರೆ ಸಾಗರ್ ಬಿಳಿಗೌಡ ಅವರು. ಆತ್ಮೀಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.
7/ 8
ಸಿರಿ ರಾಜು ಮಾಡೆಲ್ ಕಮ್ ನಟಿ. ಇವರು ಉದ್ಯಮಿ ಕೂಡ ಹೌದು. ಸಿರಿ ರಾಜು ಅವರು ಈವೆಂಟ್ ಕಂಪನಿಯನ್ನ ನಡೆಸುತ್ತಿದ್ದಾರೆ. ಈಗ ಸಾಗರ್ ಜೊತೆ ಮದುವೆ ಆಗಲು ಸಿದ್ಧವಾಗಿದ್ದಾರೆ.
8/ 8
ಶರತ್ ಪದ್ಮಾನಾಭ್, ಸಿದ್ದು ಮೂಲಿಮನೆ, ಸಾಗರ್ ಬಿಳಿಗೌಡ ನಿಶ್ಚಿತಾರ್ಥವಾಗಿದ್ದಾರೆ. ಮುಂದಿನ ವರ್ಷ ಮೂವರು ಮದುವೆ ಆಗಲಿದ್ದಾರೆ. ಎಲ್ಲರಿಗೂ ಆಲ್ ದಿ ಬೆಸ್ಟ್.