ಗಟ್ಟಿಮೇಳ ಧಾರಾವಾಹಿ ಅದಿತಿ ಮತ್ತು ಪಾರು ಧಾರಾವಾಹಿಯ ಪ್ರೀತು ತಮ್ಮ ಬಾಳಿನ ಹೊಸ ಹೆಜ್ಜೆ ಇಡಲು ರೆಡಿಯಾಗಿದ್ದರು. ಇಬ್ಬರು ಖುಷಿಯಾಗಿ ಇತ್ತಿಚೇಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. (ಕೃಪೆ: ಇನ್ಸ್ಟಾಗ್ರಾಂ)
2/ 8
ಪ್ರಿಯಾ ಮತ್ತು ಸಿದ್ದು ಮೂಲಿಮನೆ ತುಂಬಾ ದಿನಗಳಿಂದ ಎಲ್ಲಾ ಕಡೆ ಸುತ್ತುತ್ತಾ ಇದ್ರು. ಇಬ್ಬರ ನಡುವೆ ಪ್ರೀತಿ ಇರಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಅದು ನಿಜವಾಗಿದೆ. ಇಬ್ಬರು ಎಂಗೇಜ್ ಮೆಂಟ್ ಮಾಡಿಕೊಳ್ಳೋ ಮೂಲಕ ಪ್ರೀತಿ ಆಗಿದೆ ಎಂದು ಹೇಳಿಕೊಂಡಿದ್ರು.
3/ 8
ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ಪ್ರೀತಿ ಮಾಡಲು ಶುರು ಮಾಡಿ 2 ವರ್ಷ ಕಳೆದಿದೆ. ಆ ಖುಷಿಯಲ್ಲಿದೆ ಜೋಡಿ. ಆದಷ್ಟು ಬೇಗ ಮದುವೆ ಆಗುವ ನಿರೀಕ್ಷೆಯಲ್ಲಿದ್ದಾರೆ.
4/ 8
ಧಮಾಕ ಸಿನಿಮಾದಲ್ಲಿ ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ಒಟ್ಟಿಗೆ ನಟಿಸಿದ್ದರು. ಆ ಚಿತ್ರದ ಮೂಲಕವೇ ಇಬ್ಬರಿಗೂ ಪ್ರೀತಿ ಆಗಿದೆ ಎಂದು ಹೇಳಲಾಗ್ತಿದೆ. ಆ ಪ್ರೀತಿಗೆ 2 ವರ್ಷದ ಸಂಭ್ರಮ.
5/ 8
ಸಿದ್ದು ಮೂಲಿಮನೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಈ ಜೋಡಿ ನ್ಯೂ ಇಯರ್ ಅನ್ನು ಗ್ರ್ಯಾಂಡ್ ಆಗಿ ಸೆಲಬ್ರೆಷನ್ ಮಾಡಿದ್ದಾರೆ.
6/ 8
ಸಿದ್ದು ಮೂಲಿಮನೆ, ಪ್ರಿಯಾ ಆಚಾರ್ ಮದುವೆ ಯಾವಾಗ ಎಂದು ಎಲ್ಲರೂ ಕೇಳ್ತಾ ಇದ್ದಾರೆ. ಈ ಜೋಡಿ ಆದಷ್ಟು ಬೇಗ ಮದುವೆ ದಿನಾಂಕ ತಿಳಿಸಲಿದೆ.
7/ 8
ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಿಯಾ ಅವರು ನಟಿಯ ತಂಗಿ ಅದಿತಿ ಪಾತ್ರ ನಿರ್ವಹಿಸುತ್ತಿದ್ದಾರೆ. ಮನೆಯ ಕಷ್ಟಗಳಿಗೆ ಸಹಾಯ ಮಾಡ್ತಾ ಇದ್ದಾಳೆ. ಸೀರಿಯಲ್ ನಲ್ಲಿ ಧ್ರುವನನ್ನು ಪ್ರೀತಿ ಮಾಡ್ತಾ ಇದ್ದಾಳೆ.
8/ 8
ಪಾರು ಧಾರಾವಾಹಿಯಲ್ಲಿ ಸಿದ್ದು, ನಟನ ತಮ್ಮ ಪ್ರೀತು ಪಾತ್ರವನ್ನು ಮಾಡ್ತಾ ಇದ್ದಾನೆ. ಧಾರಾವಾಹಿಯಲ್ಲಿ ಜನನಿಯನ್ನು ಪ್ರೀತಿ ಮದುವೆ ಆಗಿದ್ದಾರೆ. ಈಗ ನಿಜ ಜೀವನದಲ್ಲಿ ಹೊಸ ಪಯಣ ಶುರು ಮಾಡಲಿದ್ದಾರೆ.