ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜನರಿಗೆ ಹೆಚ್ಚು ಇಷ್ಟ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ.
2/ 8
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ.
3/ 8
ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಈಗ ಸಹನಾ ಮದುವೆ ಸೆಟ್ ಆಗಿದೆ. ಆ ಸಂಭ್ರಮದಲ್ಲಿ ಪುಟ್ಟಕ್ಕನ ಕುಟುಂಬ ಇದೆ.
4/ 8
ನನ್ನ ಮೊದಲನೇ ಕನಸು ನನಸಾಗುತ್ತಿದೆ. ನನ್ನ ಮಗಳನ್ನು ಬೇರೆಯವರ ಮನೆ ದೀಪ ಬೆಳಗಿಸಲು ಕಳಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ನನ್ನ ಮಗಳ ಮೇಲೆ ಇರಲಿ, ಮದುವೆಗೆ ಬನ್ನಿ ಎಂದಿದ್ದಾರೆ.
5/ 8
ಹೆಣ್ಣು ಮಕ್ಕಳನ್ನು ಬೆಳಸಿ, ಕನ್ಯಾದಾನ ಮಾಡಿ, ಮದುವೆ ಮಾಡಿ ಕಳಿಸಲು ಪುಣ್ಯ ಮಾಡಿರಬೇಕು. ಆ ರೀತಿಯ ಪುಣ್ಯವತಿ ನಾನು ಎಂದು ಪುಟ್ಟಕ್ಕ ಹೇಳುತ್ತಿದ್ದಾರೆ. ಮಗಳಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ್ದಾರೆ.
6/ 8
ಸಹನಾ ಮದುವೆ ಸಂಭ್ರಮವನ್ನು ಪುಟ್ಟಕ್ಕನ ಕೊನೆ ಮಗಳು ಸುಮಾ ದುಪ್ಪಟ್ಟು ಮಾಡಿದ್ದಾಳೆ. ಅವ್ವನನ್ನು ಕರೆದುಕೊಂಡು ಹೋಗಿ ಡ್ಯಾನ್ಸ್ ಮಾಡಿದ್ದಾಳೆ.
7/ 8
ಪುಟ್ಟಕ್ಕ ತನ್ನ ಮೊದಲ ಮಗಳ ಮದುವೆಯನ್ನು ಆಕೆ ಇಷ್ಟ ಪಟ್ಟ ಮುರಳಿ ಮೇಷ್ಟ್ರು ಜೊತೆಯೇ ಮಾಡ್ತಾ ಇದ್ದಾರೆ. ಸಹನಾಗೂ ತುಂಬಾ ಖುಷಿ ಆಗಿದೆ.
8/ 8
ಅಕ್ಕನ ಮದುವೆ ಸಂಭ್ರಮದಲ್ಲಿರುವ ಸ್ನೇಹಾಗೆ ಕಂಠಿ ತನ್ನ ಪ್ರೀತಿಯ ವಿಷ್ಯ ಹೇಳಿಕೊಂಡಿದ್ದಾನೆ. ಸ್ನೇಹಾಳನ್ನು ತುಂಬಾ ದಿನದಿಂದ ಶ್ರೀ ಹೆಸರಲ್ಲಿ ಪ್ರೀತಿ ಮಾಡ್ತಾ ಇದ್ದ. ಈಗ ಸ್ನೇಹಾ ಒಪ್ತಾಳಾ ನೋಡಬೇಕು.