ಜೀ ಕನ್ನಡ ವಾಹಿನಿ ಮನರಂಜನೆ ನೀಡುವುದರಲ್ಲಿ ಸದಾ ಮುಂದೆ ಇರುತ್ತರೆ. ದಿನ ಧಾರಾವಾಹಿಗಳ ಮೂಲಕ ಜನರನ್ನು ರಂಜಿಸಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋ ಗಳ ಮೂಲಕ ಜನರನ್ನು ಹಿಡಿದಿಡುತ್ತಿದೆ.
2/ 8
ಜೀ ಕನ್ನಡದಲ್ಲಿ ಎಲ್ಲಾ ಧಾರಾವಾಹಿಗಳು ಸೂಪರ್ ಆಗಿ ಮೂಡಿ ಬರುತ್ತಿವೆ. ಈ ಬಾರಿ ಟಿಆರ್ ಪಿಯಲ್ಲಿ ಟಾಪ್ನಲ್ಲಿ ಇದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಪುಟ್ಟಕ್ಕನ ಕೇರ್, ಕಂಠಿ-ಸ್ನೇಹಾ ಪ್ರೀತಿ, ಸುಮಾಳ ಖೋ ಖೋ ಆಟ ಜನರಿಗೆ ಇಷ್ಟ ಆಗಿದೆ. 10.2 ಡಬಲ್ ಡಿಜಿಟ್ ಟಿಆರ್ ಪಿ ಪಡೆದು ನಂಬರ್ ಒನ್ ಸ್ಥಾನದಲ್ಲಿದೆ.
3/ 8
ಗಟ್ಟಿಮೇಳ ಧಾರಾವಾಹಿಯೂ 09.4 ಟಿಆರ್ ಪಿ ಪಡೆದು ಎರಡನೇ ಸ್ಥಾನದಲ್ಲಿದೆ. ಸೀರಿಯಲ್ ನಲ್ಲಿ ವೇದಾಂತ್ ಮಿಸ್ಸಿಂಗ್ ಆಗಿದ್ದ. ಸೀರಿಯಲ್ ಟೀಂ ಜೊತೆ ಜನ ವೇದಾಂತ್ ನನ್ನು ಹುಡುಕುತ್ತಿದ್ದಾರೆ. ಅಷ್ಟೊಂದು ಧಾರಾವಾಹಿಯಲ್ಲಿ ಮುಳುಗಿ ಹೋಗಿದ್ದಾರೆ.
4/ 8
ಹೊಸ ಧಾರಾವಾಹಿ ಶ್ರೀರಸ್ತು ಶುಭಮಸ್ತು ಧಾರಾವಾಹಿ 8.4 ಟಿಆರ್ ಪಿ ಪಡೆದ ಮೂರನೇ ಸ್ಥಾನದಲ್ಲಿದೆ. ಸುಧಾರಾಣಿಯ ತುಳಸಿ ಪಾತ್ರ ಜನರನ್ನು ತಲುಪಿದೆ. ಸಮರ್ಥ್-ಸಿರಿ ಮದುವೆ ಸಂಭ್ರಮ ನಡೆಯುತ್ತಿದೆ.
5/ 8
ಇನ್ನು ರಾತ್ರಿ 9 ಗಂಟೆಗೆ ಬರುವ ಸತ್ಯ ಧಾರಾವಾಹಿ 7.4 ಟಿಆರ್ ಪಿ ಪಡೆದು 4ನೇ ಸ್ಥಾನದಲ್ಲಿ. ಸತ್ಯ-ಕಾರ್ತಿಕ್ ಮಧ್ಯೆ ಪ್ರೀತಿ ಹುಟ್ಟುತ್ತಾ? ಸೀತಮ್ಮ ಸತ್ಯಾಳನ್ನು ಸೊಸೆ ಎಂದು ಒಪ್ಪಿಕೊಳ್ತಾಳಾ? ಎಲ್ಲವೂ ಕುತೂಹಲ ಮೂಡಿಸಿದೆ.
6/ 8
ಸಂಜೆ 7 ಗಂಟೆಗೆ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ಧಾರಾವಾಹಿಯೂ 7.4 ಟಿಆರ್ ಪಿ ಪಡೆದು 4ನೇ ಸ್ಥಾನದಲ್ಲಿ. ಧಾರಾವಾಹಿಗೆ ಅಂತರಾಳ ಎಂಟ್ರಿ ಆಗಿದ್ದು, ಸೀರಿಯಲ್ ಜನರನ್ನು ಹಿಡಿದಿಡುತ್ತಿದೆ.
7/ 8
ಇನ್ನೂ ವೀಕೆಂಡ್ ನಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ 9.6 ಟಿವಿಆರ್ ಪಡೆದಿದೆ. ಮಕ್ಕಳ ಹಾಡು ಜನರನ್ನು ಬೆರಗುಗೊಳಿಸಿದೆ. ನಾದಮಯವಾದ ಸಂಗೀತ ಎಲ್ಲರನ್ನು ಗಮನ ಸೆಳೆಯುತ್ತಿದೆ.
8/ 8
ಇನ್ನು ಕಳೆದ ವಾರ ಸರಿಗಮಪ ದಲ್ಲಿ ದಿಯಾ ಹೆಗಡೆ ಅನುಶ್ರೀ ಮೇಲೆ ಹಾಡಿದ ಹಾಡು ಸೂಪರ್ ಆಗಿ ಓಡ್ತಿದೆ. ಎಲ್ಲಾ ಕಡೆ ಶೇರ್ ಆಗ್ತಾ ಇದ್ದು, ಜನಕ್ಕೆ ಇಷ್ಟ ಆಗಿದೆ.