ಪುಟ್ಟಕ್ಕನ ಮಕ್ಕಳು ಜೀ ಕನ್ನಡದ ಹೆಸರಾಂತ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅಮೋಘವಾಗಿ ಅಭಿನಯಿಸುತ್ತಿದ್ದಾರೆ.
2/ 8
ಪುಟ್ಟಕ್ಕನ ಗಂಡ ಆಕೆಯನ್ನು ಬಿಟ್ಟು ಅದೇ ಊರಿನಲ್ಲಿ ರಾಜಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದಾನೆ. ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಗಂಡ ಬಿಟ್ಟು ಹೋಗಿದ್ದರೂ, ಮೂವರನ್ನು ಚೆನ್ನಾಗಿ ಸಾಕಿದ್ದಾಳೆ. ಮೆಸ್ ಒಂದನ್ನು ನಡೆಸುತ್ತಿದ್ದು, ಅದರಿಂದ ಜೀವನ ಸಾಗಿಸುತ್ತಿದ್ದಾಳೆ.
3/ 8
ಮೊದಲನೇ ಮಗಳು ಸಹನಾ ಓದದೇ ತನ್ನ ತಾಯಿಗೆ ಹೋಟೆಲ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾಳೆ. ಎರಡನೇ ಮಗಳು ಸ್ನೇಹ ಓದಿನಲ್ಲೂ ಜೋರು. ಮಾತಿನಲ್ಲೂ ಜೋರು. ಮೂರನೇ ಮಗಳು ಸುಮಾ ಓದಿನ ಜೊತೆ ಆಟಗಳಲ್ಲೂ ಮುಂದು.
4/ 8
ಪುಟ್ಟಕ್ಕನ ಕೊನೆ ಮಗಳು ಸುಮಾ ಖೋ ಖೋ ಆಟಗಾರ್ತಿ ಆಗಿದ್ದಾಳೆ. ಪುಟ್ಟಕ್ಕನೇ ತನ್ನ ಮಗಳಿಗೆ ಕೋಚಿಂಗ್ ನೀಡಿ, ಆಕೆಯ ತಂಡ ಗೆಲ್ಲುವಂತೆ ಮಾಡಿದ್ದಳು. ಪುಟ್ಟಕ್ಕ ಸಹ ಚಿಕ್ಕವಳಿದ್ದಾಗ ಖೋ ಖೋ ಆಟ ಆಡುತ್ತಿದ್ದಳು.
5/ 8
ಧಾರಾವಾಹಿ ಶುರುವಾದಾಗಿನಿಂದ ತುಂಬಾ ಚೆನ್ನಾಗಿ ಓಡುತ್ತಿದೆ. ಜನ ತಪ್ಪದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನೋಡ್ತಾರೆ. ಈ ಧಾರಾವಾಹಿಗೆ ಈಗ 300 ಸಂಚಿಕೆಗಳ ಸಂಭ್ರಮ. ಆ ಖುಷಿಯಲ್ಲಿದೆ ಧಾರಾವಾಹಿ ತಂಡ.
6/ 8
ಸಂಜೆ 7.30ಕ್ಕೆ ಬೇರೆ ಬೇರೆ ವಾಹಿನಿಗಳಲ್ಲಿ ಹಿಟ್ ಧಾರಾವಾಹಿಗಳು ಪ್ರಸಾರವಾಗುತ್ತವೆ. ಆ ಸಮಯಕ್ಕೆ ಮೂಡಿ ಬರುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಅವುಗಳಿಗೆ ಸ್ಪರ್ಧೆ ನೀಡುತ್ತಿದೆ. TRP ಯಲ್ಲೂ ಮುಂದಿದೆ.
7/ 8
ಕಂಠಿ ಸ್ನೇಹಳನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಆದ್ರೆ ಹೇಳಿಕೊಳ್ಳಲು ಮಾತ್ರ ಒದ್ದಾಡುತ್ತಿದ್ದಾನೆ. ಯಾಕಂದ್ರೆ ಸ್ನೇಹ, ಕಂಠಿ ಒಳ್ಳೆಯ ಸ್ನೇಹಿತರು. ಅಲ್ಲದೇ ಕಂಠಿ ಸ್ನೇಹ ಬಳಿ ಸುಳ್ಳು ಹೇಳಿದ್ದಾನೆ. ತನ್ನ ಹೆಸರನ್ನು ಶ್ರೀ ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ. ಶ್ರೀನೇ ದೊರೆ ಎನ್ನುವ ಸತ್ಯ ಸ್ನೇಹಾಗೆ ಗೊತ್ತಾಗಿದೆ.
8/ 8
ಇನ್ನು ಮರಳಿ ಮತ್ತು ಸಹನಾ ನಿಶ್ಚಿತಾರ್ಥ ಆಗಿದೆ. ಆದ್ರೆ ಮದುವೆಗೆ ಮುರಳಿ ಮನೆಯವರು ಕಾರು, ದುಡ್ಡು ಕೊಡಬೇಕು ಎನ್ನುತ್ತಿದ್ದಾರೆ. ಎಲ್ಲಾ ರಾಜಿ ಕುತಂತ್ರ ಇದು. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇನ್ನೂ ಹಲವು ಸಂಚಿಕೆಗಳನ್ನಯ ಪೂರೈಸಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.