ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಜನಪ್ರಿಯವಾಗಿದೆ. ಅದರಲ್ಲಿ ಪಾರು ಪಾತ್ರ ಜನರ ಮನಸ್ಸಿಗೆ ಹತ್ತಿರವಾಗಿದೆ. ಎಲ್ಲರೂ ಇಷ್ಟಪಟ್ಟು ನೋಡುತ್ತಿದ್ದಾರೆ.
2/ 8
ಪಾರು ಪಾತ್ರ ಮಾಡ್ತಿರೋ ಮೋಕ್ಷಿತಾ ಪೈ ಕನ್ನಡ ಮಾತ್ರವಲ್ಲದೇ ತಮಿಳು ಧಾರಾವಾಹಿಯಲ್ಲೂ ಸಹ ಅಭಿನಯಿಸುತ್ತಿದ್ದರು. ಸಿನಿಮಾಗಳಲ್ಲೂ ನಟಿಸಲು ತಯಾರಿ ನಡೆಸುತ್ತಿದ್ದಾರೆ.
3/ 8
ಪಾರು ಧಾರಾವಾಹಿಯಲ್ಲಿ ಆದಿತ್ಯನ ತಮ್ಮ ಪ್ರೀತು ತೊಂದರೆಯಲ್ಲಿ ಸಿಲುಕಿದ್ದು, ಅವನ ಕಷ್ಟ ದೂರ ಮಾಡಲು ಪಾರು ಮತ್ತು ಆದಿತ್ಯ ಒದ್ದಾಡುತ್ತಿದ್ದಾರೆ.
4/ 8
ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿಯ ಹಿರಿ ಸೊಸೆಯಾಗಿ, ಆದಿತ್ಯನ ಪ್ರೀತಿಯ ಹೆಂಡ್ತಿಯಾಗಿ ಮನೆಯ ಜವಾಬ್ದಾರಿ ಹೊತ್ತಿದ್ದಾಳೆ. ಪಾರು ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ.
5/ 8
ತಮಿಳಿನ ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಮೀನಾಕ್ಷಿ ಪೊನ್ನುಂಗ ಸೀರಿಯಲ್ನಿಂದ ಮೋಕ್ಷಿತಾ ಪೈ ಹೊರ ಬಂದಿದ್ದಾರೆ. ಮೀನಾಕ್ಷಿ ಪೊನ್ನುಂಗನಲ್ಲಿ ಮುಖ್ಯ ಪಾತ್ರಧಾರಿ ಶಕ್ತಿ ಪಾತ್ರ ನಿರ್ವಹಿಸುತ್ತಿದ್ದರು.
6/ 8
ನನ್ನ ಎಲ್ಲಾ ಅಭಿಮಾನಿಗಳಿಗೆ ಮತ್ತು ಸ್ನೇಹಿತರಿಗೆ, ವೈಯಕ್ತಿಕ ಕಾರಣಗಳಿಂದ ನಾನು ಶಕ್ತಿ ಪಾತ್ರದಲ್ಲಿ ನಟಿಸಿದ ಮೀನಾಕ್ಷಿ ಪೊನ್ನುಂಗ ಧಾರಾವಾಹಿಯಿಂದ ಹೊರಬಂದಿದ್ದೇನೆ ಎಂದು ಮೋಕ್ಷಿತಾ ಪೈ ತಿಳಿಸಿದ್ದಾರೆ.
7/ 8
ನನ್ನ ಎಲ್ಲಾ ಸಹ ನಟರು ಉತ್ತಮ ಬೆಂಬಲವನ್ನು ನೀಡಿದ್ದಾರೆ ಮತ್ತು ನನ್ನ ಎಲ್ಲಾ ತಮಿಳು ಪ್ರೇಕ್ಷಕರು, ನನ್ನನ್ನು ಶಕ್ತಿಯಾಗಿ ಸ್ವೀಕರಿಸಿದ್ದಕ್ಕಾಗಿ, ತುಂಬಾ ಪ್ರೀತಿಯನ್ನು ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮೋಕ್ಷಿತಾ ಹೇಳಿದ್ದಾರೆ.
8/ 8
ಧಾರಾವಾಹಿಯಿಂದ ತಮಿಳು ಸೇರಿದಂತೆ ಹಲವು ವಿಷಯಗಳನ್ನು ಕಲಿತೆ. ನನ್ನನ್ನು ಎಲ್ಲಾ ರೀತಿಯಲ್ಲಿ ಪ್ರೋತ್ಸಾಹಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಶಕ್ತಿ ಮತ್ತು ಇಡೀ ತಂಡವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮೋಕ್ಷಿತಾ ಹಾಕಿಕೊಂಡಿದ್ದಾರೆ.