ಕಿರುತೆರೆ ನಟ, ನಟಿಯರೆಲ್ಲಾ ಎಂಗೇಜ್ಮೆಂಟ್, ಮದುವೆ ಮಾಡಿಕೊಳ್ತಾ ಇದ್ದಾರೆ. ಇತ್ತೀಚೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಪಾರು ಧಾರಾವಾಹಿ ನಟ ಶರತ್ ಅವರು ಮದುವೆ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 8
ಶರತ್ ಪದ್ಮಾನಾಭ್ ತಮ್ಮ ನೆಚ್ಚಿನ ಹುಡುಗಿ ದಿವ್ಯಶ್ರೀ ಜೊತೆ ಕಳೆದ ನವೆಂಬರ್ ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಮನೆಯವರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು.
3/ 8
ಈಗ ಶರತ್ ಅವರು ಮದುವೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಶರತ್ ಮದುವೆಗೆ ಪಾರು ಸೀರಿಯಲ್ ತಂಡದವರು ಭಾಗಿಯಾಗಿ ವಿಶ್ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ.
4/ 8
ಶರತ್ ಪದ್ಮನಾಭ್ ಅವರ ಆರತಕ್ಷತೆಗೆ ನಟ ಅನಿರುದ್ಧ್ ಸಹ ಭಾಗಿಯಾಗಿದ್ದರು. ಜೋಡಿಗೆ ಶುಭವಾಗಲಿ, ಸಂತೋಷವಾಗಿರಿ ಎಂದು ಹಾರೈಸಿದ್ದಾರೆ.
5/ 8
ಜೀ ಕನ್ನಡದ ಗಟ್ಟಿಮೇಳ ಧಾರಾವಾಹಿ ನಾಯಕ ವೇದಾಂತ್, ಹಿಟ್ಲರ್ ಕಲ್ಯಾಣ ಧಾರಾವಾಹಿ ನಾಯಕ ಎಜೆ ಸಹ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು.
6/ 8
ಶರತ್ ಪದ್ಮಾನಾಭ್ ಮದುವೆಯಾದ ಹುಡುಗಿ ದಿವ್ಯಶ್ರೀ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಕೆಲ ದಿನಗಳಿಂದ ಪ್ರೀತಿ ಮಾಡ್ತಾ ಇದ್ದರು.
7/ 8
ಶರತ್ ಪದ್ಮನಾಭ್ ಧಾರಾವಾಹಿ ಮಾತ್ರವಲ್ಲದೇ, ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಇನ್ನಷ್ಟು ಸಿನಿಮಾಗಳನ್ನು ಮಾಡಲಿದ್ದಾರೆ.
8/ 8
ನಟ ಶರತ್ ಪದ್ಮನಾಭ್ ಮತ್ತು ದಿವ್ಯಶ್ರೀ ಜೋಡಿಗೆ ಅಭಿಮಾನಿಗಳು ವಿಶ್ ಮಾಡಿದ್ದಾರೆ. ಒಳ್ಳೆಯದಾಗಲಿ ಎಂದು ಕಾಮೆಂಟ್ ಹಾಕಿದ್ದಾರೆ.