ಪಾರು ಧಾರಾವಾಹಿಯ ಅಣ್ಣ-ತಮ್ಮ ನಿಜ ಜೀವನದಲ್ಲಿ ಎಂಗೇಜ್ ಆಗಿದ್ದಾರೆ. ಪಾರು ಧಾರಾವಾಹಿಯ ನಟ ಆದಿತ್ಯ ಅಂದ್ರೆ ಶರತ್ ಪದ್ಮಾನಾಭ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶರತ್ ಪದ್ಮಾನಾಭ್ ತಮ್ಮ ನೆಚ್ಚಿನ ಹುಡುಗಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮನೆಯವರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡು ಮದುವೆ ಆಗಲು ಸಿದ್ಧರಾಗಿದ್ದಾರೆ. ಶರತ್ ಪದ್ಮಾನಾಭ್ ಮದುವೆ ಆಗುತ್ತಿರುವ ಹುಡುಗಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈಗ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪಾರು ಧಾರಾವಾಹಿಯಲ್ಲಿ ನಟ ಆದಿತ್ಯ, ಪಾರುಳನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಪಾರು ಮನೆ ಕೆಲಸದವಳು ಆದ್ರೂ, ಮನೆಯವರ ವಿರೋಧದ ನಡುವೆ ಮದುವೆ ಆಗಿದ್ದಾರೆ. ಪಾರು ಧಾರಾವಾಹಿಯಲ್ಲಿ ಆದಿ ಅಖಿಲಾಂಡೇಶ್ವರಿಯ ಮೊದಲ ಮಗನಾಗಿದ್ದು, ಕಂಪನಿ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾನೆ. ತನ್ನ ಅದ್ಭುತ ನಟನೆ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಶರತ್ ಪದ್ಮಾನಾಭ್ ಧಾರಾವಾಹಿ ಮಾತ್ರವಲ್ಲದೇ, ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಕಿರುತೆರೆಯಲ್ಲಿ ಬ್ಯುಸಿ ಆಗಿರುವ ನಟ ಸದ್ಯ ಮದುವೆ ತಯಾರಿಯಲ್ಲಿ ಇದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಶರತ್ ಪದ್ಮಾನಾಭ್ ತಮ್ಮ ನೆಚ್ಚಿನ ಹುಡುಗಿ ಜೊತೆ ಮದುವೆ ಮಾಡಿಕೊಳ್ಳಲಿದ್ದಾರೆ. ಈಗ ನಿಶ್ಚಿತಾರ್ಥದ ಸಂಭ್ರಮದಲ್ಲಿ ಇದ್ದಾರೆ. ಶರತ್ ಪದ್ಮಾನಾಭ್ ನಿಶ್ಚಿತಾರ್ಥಕ್ಕೆ ಪಾರು ಧಾರಾವಾಹಿ ಕಲಾವಿದರು ಭಾಗಿಯಾಗಿದ್ದರು. ಅಲ್ಲದೇ ಪಾರು ಧಾರಾವಾಹಿ ಹೊಣೆ ಹೊತ್ತಿರೋ ದಿಲೀಪ್ ರಾಜ್, ಶ್ರೀ ವಿದ್ಯಾ ಕೂಡ ಭಾಗಿಯಾಗಿದ್ದರು.