ಅಖಿಲಾಂಡೇಶ್ವರಿ ಪಾತ್ರದಲ್ಲಿರುವ ವಿನಯ್ ಪ್ರಸಾದ್ ಅಭಿನಯ ನೋಡೋದೇ ಒಂದು ಚೆಂದ. ಅರಸನ ಕೋಟೆಯನ್ನು ಬೆಳೆಸುತ್ತಾ, ತನ್ನ ಮಕ್ಕಳನ್ನು ಬೆಳೆಸುತ್ತ, ತನ್ನ ಕೋಟೆಯನ್ನು ಭದ್ರಮಾಡಿಕೊಳ್ಳುತ್ತಾ ಮುನ್ನೆಡೆಯುತ್ತಿದ್ದಾರೆ. ತನ್ನ ಪಾತ್ರಕ್ಕೆ ಹೊಂದುವಂತೆ ಮೇಕಪ್ ಹಾಕಿಕೊಂಡು, ಗತ್ತು, ಗಾಂಭಿರ್ಯದಿಂದ ಸಂಸಾರದ, ಜೊತೆ ಕಂಪನಿಯನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ.