ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ಈಗಾಗಲೇ ಹಲವು ಹಿಟ್ ಧಾರಾವಾಹಿಗಳನ್ನು ನೀಡುತ್ತಾ ಇದೆ. ಈಗ ಭೂಮಿಗೆ ಬಂದ ಭಗವಂತ ಅನ್ನೋ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ.
2/ 8
ಜೀ ಕನ್ನಡ ವಾಹಿನಿ ಪ್ರೋಮೊ ಹಂಚಿಕೊಂಡಿದ್ದು ಮಿಡ್ಲಲ್ ಕ್ಲಾಸ್ ವ್ಯಕ್ತಿಯ ದಿನ ನಿತ್ಯದ ಜೀವನ ಹೇಗಿರುತ್ತೆ ಎಂದು ಅದರಲ್ಲಿ ಹೇಳಲಾಗಿದೆ. ಮನೆಯಲ್ಲಿ ನೀರಿನ ಪ್ರಾಬ್ಲಮ್ ಶುರುವಾದ್ರೆ, ಎಲ್ಲಾ ಕಡೆ ಸಮಸ್ಯೆಯೇ ಅನ್ನೋ ತರ ತೋರಿಸಲಾಗಿದೆ.
3/ 8
ಗಂಡನಿಗೆ ಸ್ನಾನ ಮಾಡಲು ನೀರು ತಂದು ಕೊಡುವ ಹೆಂಡತಿ, ಇರೋ ದುಡ್ಡಿನಲ್ಲೇ ಮನೆ ನಿಭಾಯಿಸಿಕೊಂಡು ಹೋಗುವುದು. ಗಂಡನಿಗೆ ದಿನ ನಿತ್ಯ ಬೈಯುವುದೇ ಆಗಿದೆ.
4/ 8
ಪದೇ ಪದೇ ಕೆಡುವ ಸ್ಕೂಟರ್ ನಲ್ಲೇ ಮಗನನ್ನೇ ಶಾಲೆಗೆ ಬಿಡುತ್ತಿರುವ ಹೀರೋ. ಮಗ ದೂರದಲ್ಲಿ ಇಳಿದಕೊಂಡು ಸ್ಕೂಲ್ ಗೆ ಹೋಗುತ್ತಾನೆ. ನನ್ನ ಸ್ನೇಹಿತರೆಲ್ಲಾ ಕಾರಲ್ಲಿ ಬರುತ್ತಾರೆ ಎಂದು ಹೇಳ್ತಾನೆ. ಆಗ ಹೀರೋ ನಂದು ಒಂದು ಜೀವನ ಎಂದುಕೊಂಡು ಹೋಗುತ್ತಾನೆ.
5/ 8
ಮನೆ ಜಂಜಾಟ ಮುಗಿಸಿ ಕಚೇರಿಗೆ ಹೋದ್ರೆ, ಅಲ್ಲಿ ಬಾಸ್ ಈ ಬಾರಿ ಸೇಲ್ಸ್ ಕಮ್ಮಿ ಆಗಿದೆ ಎಂದು ಬೈಯ್ತಾ ಇದ್ದಾರೆ. ಹೆಚ್ಚು ಕೆಲಸ ಕೊಡ್ಟಿದ್ದಾರೆ, ಎಲ್ಲವನ್ನೂ ಮಾಡಬೇಕಿದೆ.
6/ 8
ಸಂಜೆ ಮನೆಗೆ ಹೊರಟ್ರೆ ಟ್ರಾಫಿಕ್ ಜಾಮ್ ಕಿರಿ-ಕಿರಿ. ಈ ಮಧ್ಯೆ ಕೈ ಕೊಡುವ ಸ್ಕೂಟರ್. ಅದಕ್ಕೆ ಬೇಸರ ಆಗಿ ದೇವರಿಗೆ ಕಲ್ಲಿಂದ ಹೊಡೆಯಲು ಹೋಗ್ತಾನೆ.
7/ 8
ನಾಯಕ ಶಿವಪ್ರಸಾದ್ ಕಷ್ಟ ನೋಡಲು ಆಗದೇ ಭೂಮಿಗೆ ಭಗವಂತ ಬಂದಿದ್ದಾರೆ. ಅವನ ಸ್ಕೂಟರ್ ಸರಿ ಮಾಡಿ ಅವನ ಜೊತೆ ಮನೆಗೆ ಹೋಗ್ತಾ ಇದ್ದಾನೆ.
8/ 8
ಹೀರೋ ಪಾತ್ರದಲ್ಲಿ ನವೀನ್ ಕೃಷ್ಣ ಅಭಿನಯಿಸುತ್ತಿದ್ದಾರೆ. ಇದೊಂದು ವಿಭಿನ್ನ ಥೀಮ್ ನ ಧಾರಾವಾಹಿಗಿದ್ದು, ಹೇಗೆ ಮೂಡಿ ಬರಲಿದೆ ಎಂದು ಜನ ಕಾಯ್ತಾ ಇದ್ದಾರೆ.