ಜೀ ಕನ್ನಡ ವಾಹಿನಿಯೂ ಮನರಂಜನೆ ನೀಡುವುದರಲ್ಲಿ ಸದಾ ಮುಂದೆ ಇರುತ್ತೆ. ವಾರಾಂತ್ಯದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡ್ತಾ ಇದೆ. ಈಗ ಸೂಪರ್ ಮಾಮ್ ಕಾರ್ಯಕ್ರಮ ಬರಲಿದೆ. ಜೀ ಕನ್ನಡ ವಾಹಿನಿ ವಾರದ ದಿನಗಳಲ್ಲಿ ಧಾರಾವಾಹಿಗಳ ಮೂಲಕ ಜನರನ್ನು ಸೆಳೆಯುತ್ತೆ. ವೀಕೆಂಡ್ ನಲ್ಲಿ ರಿಯಾಲಿಟಿ ಶೋ ಗಳ ಮೂಲಕ ಮನೆ ಮಾತಾಗಿದೆ. ಕಲರ್ಸ್ ಕನ್ನಡದಲ್ಲಿ ಬರ್ತಿರೋ ನಮ್ಮಮ್ಮ ಸೂಪರ್ ಸ್ಟಾರ್ ರೀತಿ, ಜೀ ಕನ್ನದದಲ್ಲಿ ಶೀಘ್ರವಾಗಿ ಸೂಪರ್ ಮಾಮ್ ಕಾರ್ಯಕ್ರಮ ಬರಲಿದೆ. ವಾಹಿನಿ ಅದರ ಪ್ರೋಮೋ ಬಿಟ್ಟಿದೆ. ವೀಕೆಂಡ್ ನಲ್ಲಿ ಮೂಡಿ ಬರುತ್ತಿದ್ದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕರುನಾಡ ಮನೆ ಮಾತಾಗಿದೆ. ಈ ಬಾರಿ ನಟ ಶಿವರಾಜ್ ಕುಮಾರ್ ಸಹ ಜಡ್ಜ್ ಆಗಿ ಆಗಮಿಸಿದ್ರು. ಅದಲ್ಲದೇ ಡ್ರಾಮಾ ಜೂನಿಯರ್ಸ್ ಕೂಡ ಸೂಪರ್ ಆಗಿ ಮೂಡಿ ಬರುತ್ತೆ. ಡ್ರಾಮಾ ಜೂನಿಯರ್ಸ್ 4 ಸೀಸನ್ ಗಳನ್ನು ಮುಗಿಸಿದೆ. ಇದರಿಂದ ಎಷ್ಟೋ ಮಕ್ಕಳ ಪ್ರತಿಭೆ ಬೆಳಕಿಗೆ ಬಂದಿದೆ. ವೀಕೆಂಡ್ ನಲ್ಲಿ ಬರ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಸಹ ಜನರಿಗೆ ಇಷ್ಟ ಆಗಿತ್ತು. ಏನೇ ನೋವಿದ್ರೂ ಈ ಕಾಮಿಡಿ ಶೋ ನೋಡಿದ್ರೆ ಎಲ್ಲಾ ಮರೆತು ಹೋಗುತ್ತೆ. ಜನಕ್ಕೆ ತುಂಬಾ ಇಷ್ಟ ಆಗುತ್ತೆ. ಸರಿಗಮಪ ಶೋ, ದೊಡ್ಡವರು, ಮತ್ತು ಪುಟಾಣಿಗಳಿಗೂ ಇದೆ. ಸದ್ಯದರಲ್ಲೇ ಸರಿಗಮಪ ಲಿಟಲ್ ಚಾಂಪ್ಸ್ ಬರಲಿದೆ. ಇದರ ಮೂಲಕ ಎಷ್ಟೋ ಪ್ರತಿಭೆಗಳು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಈಗ ಜೀ ಕನ್ನಡದಲ್ಲಿ ಶೀಘ್ರದಲ್ಲೇ ಸೂಪರ್ ಮಾಮ್ ಕಾರ್ಯಕ್ರಮ ಬರಲಿದೆ. ತಾಯಂದಿರು-ಮಕ್ಕಳ ಶೋ ಇದು. ಕಲರ್ಸ್ ಕನ್ನಡದ ನಮ್ಮಮ್ಮ ಸೂಪರ್ ಸ್ಟಾರ್ ರೀತಿ ಇರುತ್ತೆ ಎಂದು ಹೇಳಲಾಗ್ತಿದೆ.