ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.
2/ 8
ಈ ಸೀರಿಯಲ್ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ.
3/ 8
700 ಎಪಿಸೋಡ್ ಮಾಡಿ ಕೊಟ್ಟ ಅನಿರುದ್ಧ್ ರನ್ನು, 20 ಸಂಚಿಕೆಯಲ್ಲಿ ಆದ ತೊಂದ್ರೆಯಿಂದ ಆರೂರ್ ಜಗದೀಶ್ ಅವರು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಏನೇ ಗಲಾಟೆ ಆಗಿದ್ರೂ ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದರು.
4/ 8
ಆರ್ಯವರ್ಧನ್ ಇಲ್ಲದೇ ನಮ್ಮ ಹೃದಯ ಚಿದ್ರವಾಗಿದೆ. ಆರ್ಯವರ್ಧನ್ ಪಾತ್ರದಲ್ಲಿ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಷ್ಟೋ ಅಭಿಮಾನಿಗಳು ಮನವಿ ಮಾಡಿದ್ದರು.
5/ 8
ಅನಿರುದ್ಧ್ ಇಲ್ಲದ ಧಾರಾವಾಹಿಯನ್ನು ಮೊದಲು ಧಾರಾವಾಹಿ ಮುಗಿಸಿ ಎನ್ನುವ ಕಾಮೆಂಟ್ಗಳು ಹೆಚ್ಚಾಗಿ ಬಂದಿದ್ದವು. ಅನಿರುದ್ಧ್ ಅವರನ್ನು ಕರೆಸಿ ಎಂದು ಮಹಿಳಾ ಅಭಿಮಾನಿಗಳು ಹೋರಾಟ ನಡೆಸಿದ್ದರು.
6/ 8
ಅನಿರುದ್ಧ್ ಅವರು ವಿಷ್ಣುವರ್ಧನ್ ಅಳಿಯ ಅಂತ ತುಂಬಾ ಜನ ಇಷ್ಟ ಪಟ್ಟಿದ್ರು. ಅಲ್ಲದೇ ಆರ್ಯವರ್ಧನ್ ಪಾತ್ರವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ರು.
7/ 8
ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್.
8/ 8
600ಕ್ಕೂ ಹೆಚ್ಚು ಸಂಚಿಕೆ ಮಾಡಿದ್ದ ಆರ್ಯವರ್ಧನ್ ಅವರಿಗೆ ಈ ವರ್ಷ ಯಾಕೋ ಅನ್ ಲಕ್ ಆಯ್ತು ಅನ್ನಿಸುತ್ತೆ. ಹೆಚ್ಚು ಹಿಟ್ ತಂದು ಕೊಟ್ಟ ಧಾರಾವಾಹಿಯಿಂದ ಹೊರ ಬಂದಿದ್ದಾರೆ.ಅಲ್ಲದೇ ಅನಿರುದ್ಧ್ ಔಟ್ ಆದ ಮೇಲೆ ಧಾರಾವಾಹಿ ಟೈಮ್ ಬದಲಾಗಿದೆ.