Pushpa Real Life: ಜೊತೆ ಜೊತೆಯಲಿ ಧಾರಾವಾಹಿ ಪುಷ್ಪ ನಿಜ ಜೀವನದ ಬಗ್ಗೆ ಗೊತ್ತಾ? ಗಂಡ ಬಿಟ್ಟು ಹೋಗಿದ್ಯಾಕೆ?
ಜೊತೆ ಜೊತೆಯಲಿ ಸೀರಿಯಲ್, ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ಜೊತೆ ಜೊತೆಯಲಿ ಧಾರಾವಾಹಿ ಪುಷ್ಪ ನಿಜ ಜೀವನದ ಬಗ್ಗೆ ಗೊತ್ತಾ?
ಜೊತೆ ಜೊತೆಯಲಿ ಸೀರಿಯಲ್, ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್.
2/ 8
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿ ಅಮ್ಮನ ಪಾತ್ರ ನಿರ್ವಹಿಸುತ್ತಿರುವ ಪುಷ್ಪ ಅವರು ತುಂಬಾ ಫೇಮಸ್. ಅವರ ಜೋರು ಮಾತು, ಜಗಳ, ಅನು ಮೇಲಿನ ಪ್ರೀತಿ ಜನರಿಗೆ ಇಷ್ಟ ಆಗಿದೆ.
3/ 8
ಧಾರಾವಾಹಿಯಲ್ಲಿ ಸುಬ್ಬುವಿನ ಹೆಂಡತಿ ಪಾತ್ರ ಮಾಡುತ್ತಿದ್ದಾರೆ. ಮಗಳು ಅನು ಎಂದ್ರೆ ಆಕೆಗೆ ತುಂಬಾ ಇಷ್ಟ. ಧಾರಾವಾಹಿಯಲ್ಲಿ ಇವರು ಬೆಸ್ಟ್ ಅಮ್ಮ ಆಗಿದ್ದಾರೆ.
4/ 8
ಪುಷ್ಪ ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಬೆಸ್ಟ್ ಅಮ್ಮ ಆಗಿದ್ದಾರೆ. ಇವರ ನಿಜವಾದ ಹೆಸರು ಅಪೂರ್ವ ಅಂತ. ಜೀ ಕನ್ನಡ ಅವಾರ್ಡ್ ನಲ್ಲಿ ಬೆಸ್ಟ್ ಅಮ್ಮ ಸ್ಪರ್ಧೆಯಲ್ಲಿ ಸೆಲೆಕ್ಟ್ ಆಗಿದ್ದಾರೆ.
5/ 8
ಜೀ ಕುಟುಂಬ ಅವಾರ್ಡ್ ನಾಮಿನೇಷನ್ ಪಾರ್ಟಿಯಲ್ಲಿ ಬೆಸ್ಟ್ ಅಮ್ಮ ಸೆಲೆಕ್ಟ್ ಆದವರ ನಿಜವಾದ ಮಕ್ಕಳು ಬಂದಿದ್ದಾರೆ. ಅಲ್ಲಿಗೆ ಪುಷ್ಪ ಅವರು ಮಗಳೂ ಬಂದಿದ್ದಾರೆ.
6/ 8
ನಾಮಿನೇಷನ್ ಪಾರ್ಟಿಗೆ ಬಂದ ಅಪೂರ್ವ ಮಗಳು ಅಮ್ಮನ ಬಗ್ಗೆ ಒಂದು ಸತ್ಯ ಬಾಯ್ಬಿಟ್ಟಿದ್ದಾರೆ. ಅದನ್ನು ಕೇಳಿಸಿಕೊಂಡ ಅಲ್ಲಿದವರೆಲ್ಲಾ ಕಣ್ಣೀರು ಹಾಕಿದ್ರು.
7/ 8
ಪುಷ್ಪ ಅವರ ಗಂಡ ಮಗಳು ಚಿಕ್ಕವಳಿದ್ದಾಗಲೇ ಅವರನ್ನು ಬಿಟ್ಟು ಹೋಗಿದ್ದಾರಂತೆ. ಅಲ್ಲಿಂದ ಅವರಿಗೆ ಗಂಡ ಮತ್ತು ಕುಟುಂಬದ ಯಾವುದೇ ಸಹಾಯ ಇಲ್ವಂತೆ. ಸಿಂಗಲ್ ಪೇರೆಂಟ್ ಆಗಿ ಮಗಳನ್ನು ಮುದ್ದಾಗಿ ಸಾಕಿದ್ದಾರೆ.
8/ 8
ಧಾರಾವಾಹಿ ಫುಲ್ ಜೋರು ತರ ಕಾಣೋ ಪುಷ್ಪ ಕಳೆದ 5 ವರ್ಷಗಳಿಂದ ಮಾತ್ರ ಖುಷಿ ಆಗಿದ್ದಾರಂತೆ. ಜೊತೆ ಜೊತೆಯಲ್ಲಿ ಸೀರಿಯಲ್ ತುಂಬ ಹೆಸರು ತಂದು ಕೊಟ್ಟಿದೆಯಂತೆ.