ಜನಪ್ರಿಯ ನಿರೂಪಕ, ನಟ ಮಾಸ್ಟರ್ ಆನಂದ್ ಅವರ ಹುಟ್ಟುಹಬ್ಬದಂದು ಜೀ ಕನ್ನಡ ವಾಹಿನಿ ಬಿಗ್ ಸರ್ಪ್ರೈಸ್ ನೀಡಿದೆ. ಆನಂದ್ ಅವರ 35 ವರ್ಷದ ಸಿನಿ ಪಯಣವನ್ನು ನೆನಪು ಮಾಡಿದೆ.
2/ 8
ಬೆಂಗಳೂರಿನ ಹರಿಹರನ್ ಮತ್ತು ಲತಾ ಅವರ ಪುತ್ರ ಆನಂದ್. ಆನಂದ್ ಅವರು ತಮ್ಮ ಮೂರನೇ ವರ್ಷಕ್ಕೆ ದೂರದರ್ಶನದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ರು.
3/ 8
ಮಾಸ್ಟರ್ ಆನಂದ್ ಅವರಿಗೆ ಅಪ್ಪ-ಅಮ್ಮ ಇಟ್ಟ ಹೆಸರು ಹೆಚ್ ಆನಂದ್, ಸಿನಿಮಾದಿಂದ ಆನಂದ್ ಮಾಸ್ಟರ್ ಆನಂದ್ ಆದ್ರು. ಅಲ್ಲಿಂದ ಹಲವು ಸಿನಿಮಾಗಳಲ್ಲಿ ಬಾಲ ಕಲಾವಿದರು, ನಟರಾಗಿ ಅಭಿನಯಿಸಿದ್ದಾರೆ.
4/ 8
ಜೀ ಕನ್ನಡದ ಚಾನೆಲ್ ವತಿಯಿಂದ ಮಕ್ಕಳು ಆನಂದ್ ಅವರ ರೀತಿ ವೇಷ ಹಾಕಿ ಅವರು ಮಾಡಿದ ಚಿತ್ರಗಳನ್ನು ನೆನಪಿಸಿದ್ರು. ಇದು ಗೌರಿ ಗಣೇಶ್ ಚಿತ್ರದ್ದು. ಈ ಅಭಿನಯಕ್ಕೆ ಮನಸೋಲದವರು ಇಲ್ಲ.
5/ 8
ಆನಂದ್ ಅವರು 35 ವರ್ಷ ಕಲಾವಿದರಾಗಿ ಸಿನಿಮಾ ರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ನಟನೆಯಲ್ಲಿ ಮಾತ್ರವಲ್ಲದೇ, ಮಾಸ್ಟರ್ ಆನಂದ್ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
6/ 8
ಕಿಂದರಜೋಗಿ, ಮುತ್ತಿನಹಾರ, ಶಿವಶಂಕರ್, ಚಿತ್ರ, ಗೌರಿ ಗಣೇಶ್, ಕರ್ಪೂರದ ಗೊಂಬೆ, ದೇವರು ವರವನು ಕೊಟ್ರೆ ಸೇರಿ ಹಲವು ಸಿನಿಮಾಗಳಲ್ಲಿ ಮಾಸ್ಟರ್ ಆನಂದ್ ಅಭಿನಯಿಸಿದ್ದಾರೆ.
7/ 8
ಜೀ ಕನ್ನಡ ಆನಂದ್ ಅವರ 35 ವರ್ಷಗಳ ಸಿನಿ ಪಯಣದ ಜೊತೆಗೆ ಹುಟ್ಟುಹಬ್ಬವನ್ನೂ ಗ್ರ್ಯಾಂಡ್ ಆಗಿ ಆಚರಣೆ ಮಾಡಿದ್ದಾರೆ. ಎಲ್ಲರೂ ಖುಷಿ ಆಗಿದ್ದಾರೆ.
8/ 8
ಆನಂದ್ ಅವರು ಜೀ ಕನ್ನಡ ಚಾನೆಲ್ ನ ಬಿಗ್ ಸಪ್ರ್ರೈಸ್ ನೋಡಿ ತುಂಬಾ ಖುಷಿಯಾದ್ರು. ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದ ತಿಳಿಸಿದ್ರು.