ಜೀ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಗಟ್ಟಿಮೇಳ ಧಾರಾವಾಹಿ ಪ್ರಸಾರವಾಗ್ತಿದೆ. ಧಾರಾವಾಹಿ ಅನೇಕ ತಿರುವುಗಳ ಮೂಲಕ ಸೂಪರ್ ಹಿಟ್ ಆಗಿ ರನ್ ಆಗ್ತಿದೆ. ಟಿವಿಆರ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ.
2/ 8
ಗಟ್ಟಿಮೇಳ ಧಾರಾವಾಹಿಯಲ್ಲಿ ಸುಹಾಸಿನಿ ಪಾತ್ರವು ಎಲ್ಲರ ಗಮನ ಸೆಳೆದಿದೆ. ಆ ಪಾತ್ರಕ್ಕೆ ಈಗ ಸಿಂಧು ಕಲ್ಯಾಣ್ ಅವರು ಬಂದಿದ್ದಾರೆ. ಸುಹಾಸಿನಿ ಪಾತ್ರ ನಿರ್ವಹಿಸುತ್ತಿದ್ದಾರೆ.
3/ 8
ಸಿಂಧು ಅವರು ಈ ಮೊದಲು ಪುಟ್ಟಗೌರಿ ಸೀರಿಯಲ್ ನಲ್ಲಿ ಸಾಗರಿ ಪಾತ್ರ ಮಾಡಿದ್ದರು. ನೆಗೆಟಿವ್ ರೋಲ್ ಮಾಡಿ ಜನರ ಮೆಚ್ಚುಗೆ ಗಳಿಸಿದ್ದರು.
4/ 8
ನಟಿ ಸಿಂಧು ಕಲ್ಯಾಣ್ ಅವರಿಗೆ ವಿಲನ್ ರೋಲ್ ಮಾಡಲು ಇಷ್ಟ ಅಂತೆ. ಇವರು ಸ್ಟೈಲಿಶ್ ವಿಲನ್ ಆಗಿ ಗುರುತಿಸಿಕೊಂಡಿದ್ದವರು.
5/ 8
ಸಿಂಧು ಅವರ ಪತಿ ಕಲ್ಯಾಣ್ ಅಂತ. ಕಲ್ಯಾಣ್ ಅವರು ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮುದ್ದಾದ ಹೆಣ್ಣು ಮಗು ಇದೆ.
6/ 8
ಸಿಂಧು ಕಲ್ಯಾಣ್ ಅವರು ಸುಹಾಸಿನಿಯಾಗಿ ಹೊಸದಾಗಿ ಸೇರಿಕೊಂಡಿದ್ದರು, ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಳೇ ಸುಹಾಸಿನಿ ಮರೆಯುವಂತೆ ಮಾಡಿದ್ದಾರೆ.
7/ 8
ಧಾರಾವಾಹಿಯಲ್ಲಿ ಸುಹಾಸಿನಿ ವೇದಾಂತ್, ವಿಕ್ರಾಂತ್ ಅವರಿಗೆ ಮೋಸ ಮಾಡ್ತಾ ಇದ್ದಾರೆ. ಎಲ್ಲಾ ಹಣದ ಆಸೆಯಿಂದ ಈ ರೀತಿ ನಟನೆ ಮಾಡಿದ್ದಾರೆ. ಸ್ವಂತ ಅಕ್ಕನ ಮಕ್ಕಳಿಗೆ ವಂಚನೆ ಮಾಡ್ತಿದ್ದಾರೆ.
8/ 8
ಒಂದು ವೇಳೆ ವೇದಾಂತ್ ಮುಂದೆ ಸುಹಾಸಿನಿ ಬಣ್ಣ ಬಯಲಾದ್ರೆ ಎಲ್ಲಾ ಸತ್ಯ ತಿಳಿಯಲಿದೆ. ಆಸ್ತಿಗಾಗಿ ಸುಹಾಸಿನಿ ಮಾಡ್ತಿರೋ ನಾಟಕ ಗೊತ್ತಾಗುತ್ತೆ.