ಸುಹಾಸಿನಿ ಮಕ್ಕಳ ಮುಂದೆ ಒಳ್ಳೆಯವಳ ರೀತಿ ನಾಟಕ ಆಡುತ್ತಿದ್ದಾಳೆ. ಆದ್ರೆ ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಾಳೆ. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಪರಿಮಳಗೆ 4 ಹೆಣ್ಣು ಮಕ್ಕಳು. ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು, ಈಗ ಅದಿತಿ ಮದುವೆ ಸಂಭ್ರಮ ನಡೆಯುತ್ತಿದೆ.