ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿತೇಶ್ ಕುಮಾರ್ ಕಾಪಿನಡ್ಕ ಎಲ್ಲರಿಗೂ ಪರಿಚಿತರು. ಇವರು ತಾವು ಪ್ರೀತಿಸಿದ ಹುಡುಗಿ ಸ್ವಾತಿ ಜೊತೆ ಮದುವೆ ಆಗಿದ್ದಾರೆ. (ಕೃಪೆ: ಇನ್ಸ್ಟಾಗ್ರಾಮ್)
2/ 8
ಹಿತೇಶ್ ಮತ್ತು ಸ್ವಾತಿ ಕಳೆದ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಈಗ ಆ ಪ್ರೀತಿಗೆ ಮದುವೆ ಬಂಧನವಾಗಿದೆ. ಇಬ್ಬರು ತುಂಬಾ ಖುಷಿಯಾಗಿದ್ದಾರೆ.
3/ 8
ಹಿತೇಶ್ ಹಾಗೂ ಸ್ವಾತಿ ಅದ್ಧೂರಿಯಾಗಿ ಮದುವೆ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿ ರಿಯರು, ಕುಟಂಬಸ್ಥರು, ಆಪ್ತರ ಎದುರ ತಾವು ಸ್ವಾತಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹಿತೇಶ್ ಹೇಳಿದ್ದಾರೆ.
4/ 8
ಪ್ಯಾಕು, ಪ್ಯಾಕು ಎನ್ನುತ್ತಾಲೇ ಕಾಮಿಡಿ ಕಿಲಾಡಿಗಳು ಮೂಲಕ ಹಿತೇಶ್ ಖ್ಯಾತಿ ಗಳಿಸಿದ್ದಾರೆ. ತಮ್ಮ ಅದ್ಭುತ ಕಾಮಿಡಿ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.
5/ 8
ಹಿತೇಶ್ ಹಾಗೂ ಸ್ವಾತಿ ಅಕ್ಕ ಪಕ್ಕದ ಊರಿನವರು. 2 ಕಿಲೋ ಮೀಟರ್ ದೂರ ಅಷ್ಟೆ. ಹಿತೇಶ್ ದೇವಸ್ಥಾನದಲ್ಲಿ ಸ್ವಾತಿಯನ್ನು ನೋಡಿ ಇಷ್ಟ ಪಟ್ಟಿದ್ದರಂತೆ.
6/ 8
ಇಬ್ಬರಿಗೂ ದೇವಸ್ಥಾನದಿಂದಲೇ ಪರಿಚಯ ಆಗಿ ಸ್ನೇಹಿತರಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿ 10 ವರ್ಷಗಳ ಕಾಲ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿ ಮಾಡಿದ್ದಾರೆ.
7/ 8
ಡಿಸೆಂಬರ್ 19 ರಂದು ಸ್ವಾತಿ ಹಾಗೂ ಹಿತೇಶ್ ಅವರ ನಿಶ್ಚಿತಾರ್ಥ ಸಮಾರಂಭ ಜರುಗಿತ್ತು. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ರು.
8/ 8
ಇಬ್ಬರು ಖುಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮನೆಯಲ್ಲೂ ಸದಾ ನಗು ತುಂಬಿರಲಿ ಎಂದು ಅಭಿಮಾನಿಗಳು ವಿಶ್ ಮಾಡಿದ್ದಾರೆ.