ಜನರನ್ನು ನಕ್ಕು ನಗಿಸುವ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ 4 ರ ಗ್ರ್ಯಾಂಡ್ ಫಿನಾಲೆ ಇದೇ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.
2/ 8
ಕಾರ್ಯಕ್ರಮದಲ್ಲಿ ಜಗ್ಗೇಶ್ ಗೆ ಗೌರವ ಸಲ್ಲಿಸಲಾಗಿದೆ. ನವರಸ ನಾಯಕ ಜಗ್ಗೇಶ್‍ಗೆ ಈ ಮಾರ್ಚ್ 17ಕ್ಕೆ 60 ವರ್ಷ ತುಂಬಲಿದೆ. ಅದಕ್ಕೆ ಕಾಮಿಡಿ ಕಿಲಾಡಿಗಳು ಗ್ರ್ಯಾಂಡ್ ಫಿನಾಲೆಯನ್ನು 60 ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ.
3/ 8
ಕಾಮಿಡಿ ಕಿಲಾಡಿಗಳು ಸೀಸನ್ 04ರ ಜಡ್ಜ್ ಆಗಿರುವ ನಟ ಜಗ್ಗೇಶ್‍ಗೆ ಸರ್ಪ್ರೈಸ್ ನೀಡಲಾಗಿದೆ. ಒಂದು ತಿಂಗಳು ಮುಂಚೆಯೇ ಹುಟ್ಟುಹಬ್ಬವನ್ನು ವೇದಿಕೆ ಮೇಲೆ ಸಂಭ್ರಮಿಸಿದ್ದಾರೆ.
4/ 8
ಜಗ್ಗೇಶ್ ಅವರು ಅಭಿನಯಿಸಿದ ಪಾತ್ರಗಳಲ್ಲಿ ಮಕ್ಕಳು ಬಂದು ನಟನೆ ಮಾಡಿದ್ದಾರೆ. ಅದನ್ನು ನೋಡಿ ನಟ ಜಗ್ಗೇಶ್ ತುಂಬಾ ಖುಷಿಯಾಗಿದ್ದಾರೆ.
5/ 8
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಕೆ.ಆರ್.ಪೇಟೆ ಪುರಸಭೆ ಮೈದಾನದಲ್ಲಿ ಫಿನಾಲೆ ಕಾರ್ಯಕ್ರಮ ನಡೆಯುತ್ತಿದ್ದು, ಅಲ್ಲಿ ನವರಸ ನಾಯಕರ ಸಾಧನೆಗಳನ್ನು ತೋರಿಸಲಾಗಿದೆ.
6/ 8
ಜೀ ಕನ್ನಡ ವಾಹಿನಿ ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 04 ನೀಡಿದ ಸರ್ಪ್ರೈಸ್ ಜಗ್ಗೇಶ್ ಅವರು ಕೈ ಮುಗಿದು ಧನ್ಯವಾದ ಹೇಳಿದ್ದಾರೆ.
7/ 8
ಜಗ್ಗೇಶ್ ಅವರಿಗೆ ಕಾರ್ಯಕ್ರಮದಲ್ಲಿ ಅವರ ಫೋಟೋವನ್ನು ನೀಡಿ ಗೌರವಿಸಿದ್ದಾರೆ. ಇನ್ನೂ ಹೆಚ್ಚು ವರ್ಷ ಬದುಕಿ ಎಂದು ಎಲ್ಲರು ವಿಶ್ ಮಾಡಿದ್ದಾರೆ.
8/ 8
ಕಾಮಿಡಿ ಕಿಲಾಡಿಗಳು ಸೀಸನ್ 4 ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನಡೆಯಲಿದೆ. ಯಾರು ಗೆಲ್ತಾರೆ ಅನ್ನೋ ಕುತೂಹಲನೂ ಹೆಚ್ಚಾಗಿದೆ.
ಕಾರ್ಯಕ್ರಮದಲ್ಲಿ ಜಗ್ಗೇಶ್ ಗೆ ಗೌರವ ಸಲ್ಲಿಸಲಾಗಿದೆ. ನವರಸ ನಾಯಕ ಜಗ್ಗೇಶ್‍ಗೆ ಈ ಮಾರ್ಚ್ 17ಕ್ಕೆ 60 ವರ್ಷ ತುಂಬಲಿದೆ. ಅದಕ್ಕೆ ಕಾಮಿಡಿ ಕಿಲಾಡಿಗಳು ಗ್ರ್ಯಾಂಡ್ ಫಿನಾಲೆಯನ್ನು 60 ವರ್ಷದ ಸಂಭ್ರಮವನ್ನು ಆಚರಿಸಿದ್ದಾರೆ.