ಪವರ್ಸ್ಟಾರ್ ಪುನೀತ್ ರಾಜ್ಕುಮಾರ್-ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ 'ಯುವರತ್ನ' ಚಿತ್ರ ಚಿತ್ರೀರಕಣ ವೇಳೆಯೇ ಸಾಕಷ್ಟು ಸೌಂಡ್ ಮಾಡುತ್ತಿದೆ.
2/ 49
ಚಿತ್ರ ಅನೌನ್ಸ್ ಆದಾಗಿನಿಂದ್ಲೇ ಈ ಸಿನಿಮಾ ನಾಯಕಿ ಯಾರಾಗಬಹುದು ಅನ್ನೋ ಚರ್ಚೆ ಶುರುವಾಗಿತ್ತು. ಸೌತ್ ಸಿನಿರಂಗದ ಮನಮೋಹಕ ತಾರೆಗಳಾದ ತಮನ್ನಾ, ಕೀರ್ತಿ ಸುರೇಶ್ ಅವರೆನ್ನೆಲ್ಲಾ ಹಿಂದಿಕ್ಕಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು ಮಾತ್ರ ಸಯೇಷಾ ಸೈಗಲ್.
3/ 49
ಕಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿದ್ದ ಸಯೇಷಾ ನೇರವಾಗಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು.
4/ 49
ಇತ್ತ ಚಿತ್ರಕ್ಕೆ ಆಯ್ಕೆಯಾದ ಬೆನ್ನಲ್ಲೇ ಹಸೆಮಣೆ ಏರುವ ಮೂಲಕ ಇತರೆ ನಾಯಕಿಯರನ್ನು ನಿಬ್ಬೆರಗಾಗುವಂತೆ ಮಾಡಿದ್ದರು.
5/ 49
ಕಾಲಿವುಡ್ ಚಿತ್ರರಂಗದ ಅಭಿನಯ ಚತುರ ಆರ್ಯ ಅವರೊಂದಿಗೆ ಸಯೇಷಾ ಮಾರ್ಚ್ 10ರಂದು ಹೈದರಾಬಾದಿನಲ್ಲಿ ವಿವಾಹವಾಗಿದ್ದರು.
6/ 49
ಈ ಹಿಂದೆ ಗಜನಿಕಾಂತ್ ಎಂಬ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ನಡುವೆ ಪ್ರೇಮಾಂಕುವಾಗಿತ್ತು.
7/ 49
ನಾನ್ ಕಡವುಲ್, ರಾಜರಾಣಿ ಸೇರಿದಂತೆ ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಆರ್ಯ ಹಾಗೂ ಸಯೇಷಾ ಚಿತ್ರರಂಗದಲ್ಲೇ ತೊಡಗಿಸಿಕೊಂಡಿದ್ದಾರೆ.
8/ 49
ಈ ಹಿಂದೆ ಕನ್ನಡದ ರಾಜರಥ ಸಿನಿಮಾದಲ್ಲೂ ಆರ್ಯ ಬಣ್ಣ ಹಚ್ಚಿದ್ದರು.
9/ 49
ಇದೀಗ ಕಾಲಿವುಡ್ ನಟನ ಮುದ್ದಿನ ಮಡದಿ ಕೂಡ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.