Sayyesha Saigal: ಮಗಳೊಂದಿಗೆ ಯುವರತ್ನ ನಟಿಯ ದುಬೈ ಟ್ರಿಪ್!
ಯುವತ್ನ ನಟಿ ಈಗ ಏನ್ಮಾಡ್ತಿದ್ದಾರೆ? ನೀನಾದೆ ನಾ ಅಂತ ಹಾಡಿ ಕನ್ನಡ ಸಿನಿಪ್ರೇಕ್ಷಕರ ಮನಸು ಗೆದ್ದ ನಟಿ ಪುಟ್ಟ ಮಗಳೊಂದಿಗೆ ದುಬೈ ಟ್ರಿಪ್ ಮಾಡಿದ್ದಾರೆ.
1/ 6
ಕಾಲಿವುಡ್ ಜೋಡಿ ಸಯೇಷಾ ಹಾಗೂ ಆರ್ಯ ಅವರ ಮುದ್ದಿನ ಮಗಳು ಅರಿಯಾನಾ. ಯುವರತ್ನ ಸಿನಿಮಾ ಮೂಲಕ ಅಪ್ಪು ಜೊತೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು ಈ ನಟಿ.
2/ 6
ಸಿನಿಮಾ ಹಿನ್ನೆಲೆಯಿಂದಲೇ ಬಂದಿರುವ ಸಯೇಷಾ ಅವರಿಗೆ ಮುದ್ದಾದ ಮಗಳಿದ್ದಾಳೆ. ನಟಿ ಈಗ ಮಗಳ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದು ಸಿನಿಮಾದಿಂದ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದಾರೆ.
3/ 6
ಕಾಲಿವುಡ್ ನಟ ಆರ್ಯ ಕೂಡಾ ತನ್ನ ಮುದ್ದಾದ ಮಗಳ ಜೊತೆ ಫೋಟೋಸ್ ಶೆರ್ ಮಾಡಿದ್ದಾರೆ. ನಟ ಕೂಡಾ ಈಗ ತಮಿಳಿನಲ್ಲಿ ಅಷ್ಟಾಗಿ ಸಿನಿಮಾಗಳನ್ನು ಮಾಡುತ್ತಿಲ್ಲ.
4/ 6
ಸಯೇಷಾ ಮಗಳು ಅರಿಯಾನಾ ಕ್ಯೂಟ್ ಆಗಿದ್ದು ಇತ್ತೀಚಿನ ಕೆಲವು ದುಬೈ ವೆಕೇಷನ್ ಫೋಟೋಗಳು ವೈರಲ್ ಆಗಿವೆ. ನಟಿ ತಮ್ಮ ಮಗಳು ಹಾಗೂ ಪತಿಯೊಂದಿಗೆ ದುಬೈ ಪ್ರವಾಸ ತೆರಳಿದ್ದಾರೆ.
5/ 6
ಸಿಂಪಲ್ ಆಗಿ ಬ್ಲೂ ಕಲರ್ ಡ್ರೆಸ್ ಧರಿಸಿ ಕಾಣಿಸಿಕೊಂಡ ಸಯೇಷಾ ಪತಿಯ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆರ್ಯ ಅವರು ಮಗಳನ್ನು ಎತ್ತಿಕೊಂಡಿರುವುದನ್ನು ಕಾಣಬಹುದು.
6/ 6
ದುಬೈ ಪ್ರವಾಸ ತೆರಳಿದ ಸಯೇಷಾ ಮಗಳು ಕೂಡಾ ಫುಲ್ ಎಕ್ಸೈಟ್ ಆಗಿದ್ದನ್ನು ಫೋಟೋದಲ್ಲಿ ಕಾಣಬಹುದು. ಸಯೇಷಾ ಅವರ ತಾಯಿ ಮೊಮ್ಮಗಳ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
First published: