Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

ಡಾ.ರಾಜ್ ಕುಟುಂಬದ ಮತ್ತೊಬ್ಬ ಮೊಮ್ಮಗ ನಿನ್ನೆ ಅಧಿಕೃತವಾಗಿ ಸಿನಿಮಾ ರಂಗ ಪ್ರವೇಶಿಸಿದ್ದಾರೆ. ಯುವ ರಾಜ್​ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಯುವ ರಾಜ್ ನಟನೆಯ ಸಿನಿಮಾ ಶೀರ್ಷಿಕೆ ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಸಿನಿಮಾಗೆ ಯುವ ಎಂದು ಟೈಟಲ್ ಫಿಕ್ಸ್ ಮಾಡಿದ್ದು, ಇದೀಗ ಟೈಟಲ್ ಹಿಂದಿನ ಲೆಕ್ಕಾಚಾರವೇ ಸಖತ್ ಸುದ್ದಿಯಾಗಿದೆ.

First published:

  • 18

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಯುವ ರಾಜ್​ಕುಮಾರ್ ಲಾಂಚ್ ಮಾಡಲು ಕುಟುಂಬ ಬಿಗ್ ಪ್ರಾಜೆಕ್ಟ್​ಗಾಗಿಯೇ ಕಾಯುತ್ತಿತ್ತು. ಕೊನೆಗೂ ಚಿಕ್ಕಪ್ಪ ಪುನೀತ್ ರಾಜ್ ಕುಮಾರ್​ಗಾಗಿ ರೆಡಿಯಾದ ಸಿನಿಮಾದಲ್ಲಿ ಯುವ ರಾಜ್ ಕುಮಾರ್ ಕಾಣಿಸಿಕೊಳ್ತಿದ್ದಾರೆ. ಜೊತೆಗೆ ಅಪ್ಪು ಸಿನಿಮಾ ರೀತಿಯೇ ಯುವರಾಜ್ ಕುಮಾರ್ ಮೊದಲ ಸಿನಿಮಾಗೂ ಟೈಟಲ್ ಫಿಕ್ಸ್ ಆಗಿದೆ.

    MORE
    GALLERIES

  • 28

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಯುವ ರಾಜ್ ಕುಮಾರ್ ಸಿನಿಮಾ ಶೀರ್ಷಿಕೆ ಭಾರೀ ಕುತೂಹಲ ಮೂಡಿಸಿತ್ತು. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್ ಯುವರಾಜ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಟೈಟಲ್ ಬಗ್ಗೆ ಅನೇಕ ಪ್ಲಾನ್ ಮಾಡಿದ್ರು.

    MORE
    GALLERIES

  • 38

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಚಿತ್ರತಂಡ ಮೂರು ಸಿನಿಮಾ ಶೀರ್ಷಿಕೆಗಳನ್ನೂ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿತ್ತು. ಡಾ.ರಾಜ್ ನಟನೆಯ ಜ್ವಾಲಾಮುಖಿ ಮತ್ತು ಅಶ್ವಮೇಧ ಚಿತ್ರಗಳ ಶೀರ್ಷಿಕೆಯನ್ನೂ ಆಯ್ಕೆ ಮಾಡಿತ್ತು.

    MORE
    GALLERIES

  • 48

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಜ್ವಾಲಾಮುಖಿ ಅಥವಾ ಅಶ್ವಮೇಧ ಇವೆರಡರಲ್ಲಿ ಒಂದು ಟೈಟಲ್ ಫಿಕ್ಸ್ ಆಗೋದು ಗ್ಯಾರೆಂಟಿ ಎನ್ನಲಾಗಿತ್ತು. ಆದರೆ ಕೊನೆಯ ಕ್ಷಣದ ಬದಲಾವಣೆ ಎಂಬಂತೆ ಸಿನಿಮಾಗೆ ‘ಯುವ’ (Yuva) ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ.

    MORE
    GALLERIES

  • 58

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಪುನೀತ್ ರಾಜ್ಕುಮಾರ್ ಉತ್ತರಾಧಿಕಾರಿ ಎಂದೇ ಯುವ ರಾಜ್ ಕುಮಾರ್ ಅವರನ್ನು ಕರೆಯಲಾಗ್ತಿದೆ. ಯುವ ರಾಜ್ ಕುಮಾರ್ ಕೂಡ ಚಿಕ್ಕಪ್ಪನ ಹಾದಿಯಲ್ಲೇ ಮುನ್ನಡೆಯುವ ಕನಸು ಕಾಣ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಸಿನಿಮಾಗೂ ಕೊನೆಯ ಕ್ಷಣದಲ್ಲಿ ಅಪ್ಪು ಎಂದು ಹೆಸರಿಡಲಾಗಿತ್ತು.

    MORE
    GALLERIES

  • 68

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಸ್ಯಾಂಡಲ್ವುಡ್ನಲ್ಲಿ ಯುವ ರಾಜ್ ಕುಮಾರ್, ‘ಯುವ’ ಹೆಸರಿನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಪುನೀತ್ ಅವರನ್ನು ಕೂಡ ಎಲ್ಲ ಅಪ್ಪು ಎನ್ನುತ್ತಿದ್ರು. ಮೊದಲ ಸಿನಿಮಾಗೆ ಅವರ ಹೆಸರನ್ನೇ ಆಯ್ಕೆ ಮಾಡಿದ್ರು. ಯುವ ರಾಜ್ ಮೊದಲ ಸಿನಿಮಾಗೂ ಯುವ ಎಂದು ಹೆಸರಿಡಲಾಗಿದೆ.

    MORE
    GALLERIES

  • 78

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಮೊದಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಅಪ್ಪುಆಗಿ ಫೇಮಸ್ ಆದರು. ಯುವ ರಾಜ್ ಕುಮಾರ್ ಕೂಡ ಯುವ ಹೆಸರಿನಿಂದಲೇ ಮುಂದುವರೆಯಲಿ ಎನ್ನುವ ಗುರಿಯೂ ಈ ಟೈಟಲ್ ಹಿಂದಿದೆ ಎಂದು ಹೇಳಲಾಗ್ತಿದೆ.

    MORE
    GALLERIES

  • 88

    Kannada Movie: 'ಯುವ' ಟೈಟಲ್​ಗೂ 'ಅಪ್ಪು' ಸ್ಪೂರ್ತಿ! ಯುವ ರಾಜ್​ಕುಮಾರ್​ ಸಿನಿಮಾ ಶೀರ್ಷಿಕೆ ಹಿಂದಿದೆ ಹಲವು ಲೆಕ್ಕಾಚಾರ

    ಇದೀಗ ಯುವ ಟೈಟಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿದೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯುವ ರಾಜ್ ಕುಮಾರ್ ಅವರನ್ನು ಲಾಂಚ್ ಮಾಡುತ್ತಿದ್ದಾರೆ. ಇದೇ ತಿಂಗಳಿನಿಂದ ಚಿತ್ರೀಕರಣ ಕೂಡ ಶುರುವಾಗಲಿದೆ.

    MORE
    GALLERIES