Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

Yuva Rajkumar: ನಟ ಯುವ ರಾಜ್​ಕುಮಾರ್ 30ನೇ ವರ್ಷದ ಬರ್ತ್​ಡೇ ಆಚರಿಸುತ್ತಿದ್ದಾರೆ. ನಟನ ಮನೆ ಮುಂದೆ ಅಭಿಮಾನಿಗಳ ದಂಡೇ ಬಂದಿದೆ.

First published:

  • 16

    Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

    ದೊಡ್ಮನೆ ಕುಟುಂಬದ ಕುಡಿ ಯುವರಾಜ್ ಕುಮಾರ್​ ಅವರು ಇಂದು 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯುವರಾಜ್ ಕುಮಾರ್ ಬರ್ತ್​ಡೇ ಹಿನ್ನೆಲೆ ಅವರ ನಿವಾಸದ ಬಳಿ ಅಭಿಮಾನಿಗಳ ದಂಡು ಸೇರಿದೆ.

    MORE
    GALLERIES

  • 26

    Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

    ಸದಾಶಿವನಗರದಲ್ಲಿರುವ ನಟನ ಮನೆಯ ಬಳಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಭಿಮಾನಿಗಳ ಮಧ್ಯೆ ಯುವರಾಜ್ ಕುಮಾರ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    MORE
    GALLERIES

  • 36

    Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

    ತಂದೆ ರಾಘವೇಂದ್ರ ರಾಜ್​ಕುಮಾರ್, ತಾಯಿ, ಅಣ್ಣ ಮತ್ತು ಅಭಿಮಾನಿಗಳ ಬಳಿ ಮಧ್ಯೆ ಯುವರಾಜ್ ಕುಮಾರ್ ಕೇಕ್ ಕಟ್ಟಿಂಗ್ ಮಾಡಿದ್ದು ಫ್ಯಾನ್ಸ್ ಯುವ ನಟನಿಗೆ ಶುಭ ಹಾರೈಸಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬ ಆಚರಿಸಲು ರಾಜ್ಯದ ಬೇರೆ ಬೇರೆ ಭಾಗಗಳಿಂದ ಅಭಿಮಾನಿಗಳು ಬಂದಿದ್ದರು.

    MORE
    GALLERIES

  • 46

    Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

    ಅಭಿಮಾನಿಗಳು ತಂದಿದ್ದ ಕೇಕ್​ಗಳನ್ನು ಕತ್ತರಿಸಿ ಅಭಿಮಾನಿಗಳಿಗೆ ಕೇಕ್ ತಿನ್ನಿಸಿ ಯುವ ಸಂಭ್ರಮಿಸಿದ್ದಾರೆ. ಹುಟ್ಟುಹಬ್ಬ ಆಚರಣೆ ವೇಳೆ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್ ತಮ್ಮ ಪುನೀತ್ ರಾಜ್​ಕುಮಾರ್​ನನ್ನು ನೆನೆದು ಭಾವುಕರಾಗಿದ್ದಾರೆ.

    MORE
    GALLERIES

  • 56

    Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

    ಇದೆಲ್ಲ ನನ್ನ ತಮ್ಮನ ಆರ್ಶೀವಾದದಿಂದ ನಡೆಯುತ್ತಿದೆ. ಅಭಿಮಾನಿಗಳ ಅಭಿಮಾನಕ್ಕೆ ನಾವು ಚಿರ ಋಣಿ. ಇದನ್ನೆಲ್ಲ ನೋಡೋಕೆ ನಾನು ಬದುಕಿದ್ದೇನೆ. ಕಣ್ಣು ತುಂಬಿಕೊಳ್ಳುತ್ತಿದ್ದೇನೆ. ಈ ವರ್ಷ ಯುವ ಸಿನಿಮಾ ಬರುತ್ತಿದೆ. ಈಗ ಇನ್ನೂ ಇಂಡಸ್ಟ್ರಿಗೆ ಬರುತ್ತಿದ್ದಾನೆ. ಅವನ ಮೇಲೆ ನಿಮ್ಮ ಆರ್ಶೀವಾದ ಇರಲಿ ಎಂದಿದ್ದಾರೆ.

    MORE
    GALLERIES

  • 66

    Yuva Rajkumar: ಯುವ ಬರ್ತ್​ಡೇ! ಮನೆಮುಂದೆ ಅಭಿಮಾನಿಗಳ ದಂಡು! ಅಪ್ಪಾಜಿಯ ನೆನಪಿಸಿಕೊಂಡ ರಾಘಣ್ಣ

    2002 -03 ರಲ್ಲಿ ಪುನೀತ್ ಬರ್ತ್​ಡೇಗೆ ಅಭಿಮಾನಿಗಳ ದಂಡೇ ಬಂದಿತ್ತು. ಅವತ್ತು ಅಪ್ಪಾಜಿ ಸಂತಸ ಪಟ್ಟಿದ್ರು. ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

    MORE
    GALLERIES