Sudheer Varma Suicide: ಚಿತ್ರರಂಗಕ್ಕೆ ಮತ್ತೊಂದು ಆಘಾತ, ಆತ್ಮಹತ್ಯೆಗೆ ಶರಣಾದ ಯುವನಟ!
ಟಾಲಿವುಡ್ ಚಿತ್ರರಂಗಕ್ಕೆ ಮತ್ತೊಂದು ಆಘಾತವಾಗಿದ್ದು, ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಧೀರ್ ವರ್ಮಾ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಗಣ್ಯರು ಕಂಬನಿ ಮಿಡಿದಿದ್ದಾರೆ.
ಅನೇಕ ಸಿನಿಮಾಗಳ ಮೂಲಕ ಜನಪ್ರಿಯರಾಗಿದ್ದ ನಟ ಸುಧೀರ್ ವರ್ಮಾ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
2/ 8
ಇದೇ ತಿಂಗಳ 18 ರಂದು ಸುಧೀರ್ ಅವರು ಕೆಲವು ವೈಯಕ್ತಿಕ ಕಾರಣಗಳಿಂದ ಹೈದರಾಬಾದ್ನಲ್ಲಿ ವಿಷ ಸೇವಿಸಿದ್ದರು. ಕೂಡಲೇ ಅವರನ್ನು ಕೊಂಡಾಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ತಿಂಗಳ 19ರವರೆಗೂ ಅಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.
3/ 8
2016ರಲ್ಲಿ ತೆರೆ ಕಂಡಿದ್ದ ರಾಘವೇಂದ್ರ ರಾವ್ ಪ್ರಸ್ತುತ ಪಡಿಸಿದ 'ಕುಂದನಪು ಬೊಮ್ಮ' ಚಿತ್ರದಲ್ಲಿ ಸುಧೀರ್ ಕಾಣಿಸಿಕೊಂಡಿದ್ದರು.
4/ 8
ಅದಕ್ಕೂ ಮುನ್ನ ತೆರೆಕಂಡ 'ಸೆಕೆಂಡ್ ಹ್ಯಾಂಡ್' ಚಿತ್ರ ಸೇರಿದಂತೆ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಸುಷ್ಮಿತಾ ನಿರ್ಮಾಣದ 'ಶೂಟೌಟ್' ಎಂಬ ವೆಬ್ ಸಿರೀಸ್ನಲ್ಲಿಯೂ ಸುಧೀರ್ ಅವರು ನಟಿಸಿದ್ದರು.
5/ 8
‘ಕುಂದನಪು ಬೊಮ್ಮ’ ಸಿನಿಮಾದಲ್ಲಿ ಅವರೊಂದಿಗೆ ನಟಿಸಿದ್ದ ಸುಧಾಕರ್ ಕೋಮಕುಲ ಅವರು ಸುಧೀರ್ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
6/ 8
ಸುಧೀರ್ ಸಾವು ಆಘಾತ ತಂದಿದೆ. ಈ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.
7/ 8
ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಆದ್ರೆ ನಟನಿಗೆ ಸಿನಿಮಾಗಳಲ್ಲಿ ಅವಕಾಶ ಸಿಗದೆ ಬೇಸತ್ತಿದ್ದ ಎನ್ನುವ ಮಾತು ಸಹ ಕೇಳಿ ಬರ್ತಿದೆ.
8/ 8
2010ರಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಸುಧೀರ್ ಅವರು ಪಾತ್ರಗಳನ್ನು ಪಡೆದುಕೊಳ್ಳಲು ತುಂಬ ಕಷ್ಟಪಟ್ಟಿದ್ದರು.