ರಾಕೇಶ್ ಅಡಿಗ ಬಿಗ್ ಬಾಸ್ ಗೆಲ್ಲಬೇಕಿತ್ತು ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿತ್ತು. ಆದರೆ ಗೆದ್ದಿದ್ದು ರೂಪೇಶ್ ಶೆಟ್ಟಿ. ಆದರೆ ರಾಕೇಶ್ ಅಡಿಗ ಅವರು ಈ ಶೋ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
2/ 8
ಇದೀಗ ರಾಕೇಶ್ ಅಡಿಗ ಅವರಿಗಾಗಿ ಸ್ಪೆಷಲ್ ಕಾರ್ಯಕ್ರಮವೊಂದು ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನೀವೂ ಕೂಡಾ ಭಾಗವಹಿಸಹುದು. ರಾಕಿಯನ್ನು ಭೇಟಿ ಮಾಡಬಹುದು.
3/ 8
ರಾಕಿ ಟ್ರೈಬ್ ಮೀಟ್ ಎಂಬ ಕಾರ್ಯಕ್ರಮ ನಡೆಯಲಿದ್ದು ಇದರಲ್ಲಿ ಬಿಗ್ಬಾಸ್ ರಾಕಿಗೆ ಅಭಿನಂದನೆ ಸಲ್ಲಿಸಲಾಗುತ್ತದೆ. ರಾಕಿ ಟ್ರೈಬ್ ಎಂಬ ಅಭಿನಂದನಾ ಕಾರ್ಯಕ್ರಮ ನಡೆಸಲಾಗುತ್ತಿದೆ.
4/ 8
ಸಾಮಾನ್ಯವಾಗಿ ಸೆಲೆಬ್ರಿಟಿ ಪ್ರೋಗ್ರಾಂ ಎಂದಾಗ ಅಲ್ಲಿ ಸಾಕಷ್ಟು ನಿರ್ಬಂಧಗಳಿರುತ್ತವೆ. ಆದರೆ ಇಲ್ಲಿ ನಟ ರಾಕೇಶ್ ಅಡಿಗ ಕಾರ್ಯಕ್ರಮಕ್ಕೆ ಫ್ರೀ ಎಂಟ್ರಿ ಇಡಲಾಗಿದೆ.
5/ 8
ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂ ಗೇಟ್ ನಂಬರ್ 2, ಬಾಸ್ಕೆಟ್ ಬಾಲ್ ಕೋರ್ಟ್ ಎಂಟ್ರೆನ್ಸ್, ಬೈರಸಂದ್ರ ಮೈನ್ ರೋಡ್, ಜಯನಗರದಲ್ಲಿ ಕಾರ್ಯಕ್ರಮ ನಡೆಯಲಿದೆ.
6/ 8
ಈ ಕಾರ್ಯಕ್ರಮದಲ್ಲಿ ಓಪನ್ ಎಂಟ್ರಿ ಇಡಲಾಗಿದ್ದು ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದಾಗಿದೆ. ಹಾಗಾಗಿ ರಾಕಿ ಅಭಿಮಾನಿಗಳು ಈ ವಿಷಯ ತಿಳಿದು ಥ್ರಿಲ್ ಆಗಿದ್ದಾರೆ.
7/ 8
ನೆಚ್ಚಿನ ರಾಕೇಶ್ ಅಡಿಗ ಅವರನ್ನು ಭೇಟಿ ಮಾಡಿ ಫೊಟೋ ತೆಗೆಸಿಕೊಳ್ಳಲು ಬಹಳಷ್ಟು ಅಭಿಮಾನಿಗಳು ಕಾಯುತ್ತಿದ್ದಾರೆ. ಹಾಗಾಗಿ ಅಂಥವರಿಗೆ ಇದೊಂದು ಉತ್ತಮ ಅವಕಾಶ.
8/ 8
ಬಿಗ್ಬಾಸ್ ರಿಸಲ್ಟ್ ಅನೌನ್ಸ್ ಆದಾಗ ರಾಕೇಶ್ ಅಡಿಗ ಕಪ್ ಗೆಲ್ಲುತ್ತಾರೆ ಎಂದು ಬಹಳಷ್ಟು ಜನರು ಅಂದುಕೊಂಡಿದ್ದರು. ಕಪ್ ಅವರೇ ಗೆಲ್ಲಬೇಕು ಎಂದು ಅಭಿಯಾನ ಕೂಡಾ ಮಾಡಿದ್ದರು.