ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಮತ್ತು ಲೈಮ್-ಲೈಟ್ ನಿಂದ ದೂರ ಉಳಿಯುವ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಅವರು ಕಿರಣ್ ರಾವ್ ಅವರೊಂದಿಗೆ ವಿಚ್ಛೇದನದ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು. 15 ವರ್ಷಗಳ ಅವರ ವೈವಾಹಿಕ ಜೀವನದಲ್ಲಿ, ಎಲ್ಲವೂ ಚೆನ್ನಾಗಿದೆ ಮತ್ತು ಇಬ್ಬರೂ ಪರಸ್ಪರ ಸಂತೋಷದಿಂದ ಇದ್ದಾರೆ ಎಂದು ನಂಬಲಾಗಿತ್ತು. ಇಬ್ಬರೂ ಜಂಟಿ ಹೇಳಿಕೆ ನೀಡುವ ಮೂಲಕ ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ್ದರು.