'ಕರ್ಣನ್': ಧನುಷ್ ನಟಿಸಿದ 'ಕರ್ಣನ್' ಸಿನಿಮಾ ತೆರೆ ಕಂಡಿದ್ದು 2021 ಏಪ್ರಿಲ್ 09ರಂದು. 'ಕರ್ಣನ್' ಸಿನಿಮಾವನ್ನು ದೃಶ್ಯ ಕಾವ್ಯಕ್ಕೆ ಹೋಲಿಸಲಾಯಿತು. ಸಿನಿಮಾದಲ್ಲಿ ನಿರ್ದೇಶಕ ಮಾರಿ ಸೆಲ್ವರಾಜ್ ಬಳಸಿ ಉಪಮೆಗಳು ಅದೆಷ್ಟು ಗಟ್ಟಿಯೂ, ಸುಂದರವಾಗಿಯೂ ಇದ್ದುವೆಂದರೆ ಅವುಗಳ ಬಗ್ಗೆಯೇ ವಿಶೇಷ ಲೇಖಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ನಿರ್ದೇಶಕರು ದಮನಿತರ ಕತೆಗಳಿಗೆ ಸಿನಿಮಾಗಳ ಮೂಲಕ ದನಿಯಾಗುವ ಧೈರ್ಯ ನೀಡಿತು. 'ಕರ್ಣನ್' ಸಿನಿಮಾ ಈ ವರ್ಷ ಬಿಡುಗಡೆ ಆದ ಅತ್ಯುತ್ತಮ ಸಿನಿಮಾದಲ್ಲಿ ಒಂದೆನಿಸಿಕೊಂಡಿದೆ.
'ಉಪ್ಪೆನ': ತೆಲುಗಿನ 'ಉಪ್ಪೆನ' ಸಿನಿಮಾ ಜಾತಿ-ಪ್ರೀತಿ ಮತ್ತು ಕುಟುಂಬ ಮರ್ಯಾದೆಯ ವಿಷಯದ ಮೇಲೆ ಬೆಳಕು ಚೆಲ್ಲಿದ್ದ ಸಿನಿಮಾ. ಸಿನಿಮಾದ ನಾಯಕ ದಲಿತ, ನಾಯಕಿ ಮೇಲ್ಜಾತಿಯಾಕೆ. ನಾಯಕಿಯ ಅಪ್ಪನಿಗೆ ಮಗಳು ಕೀಳು ಜಾತಿಯವನ ವಿವಾಹವಾಗುವುದು ಇಷ್ಟವಿರುವುದಿಲ್ಲ. ಕೊನೆಗೆ ಮಗಳನ್ನು ಪ್ರೀತಿಸಿದ ಯುವಕನ ಮರ್ಮಾಂಗವನ್ನೇ ಕಡಿಸಿಬಿಡುತ್ತಾನೆ ಅಪ್ಪ ಆದರೆ ಗಂಡಸುತನ ಅಥವಾ ಮನುಷ್ಯತ್ವ ಯಾವುದೇ ಅಂಗಕ್ಕೆ ಸೀಮಿತವಾದುದಲ್ಲ ಎಂದು ಹೇಳಿ ಕೊನೆಗೆ ನಾಯಕಿ ಮತ್ತೆ ನಾಯಕನನ್ನು ಸೇರಿಕೊಳ್ಳುತ್ತಾಳೆ.
'ಲವ್ ಸ್ಟೋರಿ' ; ತೆಲುಗಿನ ಶೇಖರ್ ಕಮ್ಮುಲ ಜಾತಿ ವಿಷಯವನ್ನು ಪ್ರಧಾನವಾಗಿರಿಸಿಕೊಂಡು ಮಾಡಿದ ಸಿನಿಮಾ 'ಲವ್ ಸ್ಟೋರಿ'. ಹೊಸ ತಲೆಮಾರಿನ, ವಿದ್ಯಾವಂತ ದಲಿತನೂ ಸಹ ಹೇಗೆ ಅಸ್ಪೃಶ್ಯತೆ ಈಡಾಗುತ್ತಾನೆ, ಸಮಸ್ಯೆಗೆ, ಮಾಸಿಕ ಹಿಂಸೆಗೆ ಗುರಿಯಾಗುತ್ತಾನೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಪ್ರೇಮಕತೆಗೆ ಹೆಚ್ಚು ಒತ್ತು ನೀಡಿರುವ ಕಾರಣ ಜಾತಿಯ ವಿಷಯ ತುಸು ಗೌಣವಾಗಿದೆಯಾದರೂ ಇದೊಂದು ಗಟ್ಟಿ ಪ್ರಯತ್ನವೆಂದೇ ಹೇಳಬಹುದು.
ಅಜೀಬ್ ದಾಸ್ತಾ: 'ಅಜೀಬ್ ದಾಸ್ತಾ' ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆದ ಅಂತಾಲಜಿ ಸಿನಿಮಾ. ಈ ಸಿನಿಮಾದ ನಾಲ್ಕು ಉಪಕತೆಗಳಲ್ಲಿ ಒಂದು 'ಗೀಲಿ ಪುಚ್ಚಿ'. ಈ ಕಿರು ಸಿನಿಮಾವು ದಲಿತ ಮಹಿಳೆಯೊಬ್ಬಳ ತೊಳಲಾಟ. ನಗರ ಜೀವನದಲ್ಲಿ ತಮ್ಮ ಜಾತಿ ವಿಷಯವನ್ನು ಬಚ್ಚಿಡಬೇಕಾದ ಪರಿಸ್ಥಿತಿ, ಅನಿವಾರ್ಯತೆ. ನಗರದ ಕಾರ್ಪೊರೇಟ್ ಕಚೇರಿಗಳಲ್ಲಿಯೂ ದಲಿತರ ಬಗೆಗಿನ ನಿಲವು ಇನ್ನಿತರೆ ವಿಚಾರಗಳನ್ನು ಚರ್ಚಿಸುತ್ತದೆ.
'ಜೈ ಭೀಮ್': ಈ ವರ್ಷ ಅತಿ ಹೆಚ್ಚು ಚರ್ಚಿತವಾದ ಸಿನಿಮಾಗಳಲ್ಲಿ ಒಂದು 'ಜೈ ಭೀಮ್'. ಸೂರ್ಯ ನಟಿಸಿ ನಿರ್ಮಾಣ ಮಾಡಿದ್ದ ಈ ಸಿನಿಮಾ ದಲಿತರ ಮೇಲೆ ಪೊಲೀಸರು ಹಾಗೂ ಮೇಲ್ಜಾತಿಯವರು ಮಾಡುವ ದಬ್ಬಾಳಿಕೆ ಮೇಲೆ ಬೆಳಕು ಚೆಲ್ಲುತ್ತದೆ. ನಿಜವಾದ ಘಟನೆ ಆಧರಿಸಿದ ಸಿನಿಮಾ ಇದಾಗಿದ್ದು ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆ ಆಗಿ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. .