ಸಮಂತಾ ಅವರ ಇತ್ತೀಚಿನ ಸಿನಿಮಾ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶೋದಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸ್ವಲ್ಪ ವಿವಾದವೂ ನಡೆದಿದೆ. ಈ ಸಿನಿಮಾ ಒಟಿಟಿಯಲ್ಲಿ ಬರ್ತಿದೆ. ಇಲ್ಲಿದೆ ಡೀಟೆಲ್ಸ್.
ಸಮಂತಾ ರುಥ್ ಪ್ರಭು ಅವರು ಅಭಿನಯಿಸಿದ ಲೇಟೆಸ್ಟ್ ಸಿನಿಮಾ ಯಶೋದಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಸಿನಿಮಾ ನವೆಂಬರ್ 11ರಂದು ರಿಲೀಸ್ ಆಗಿತ್ತು. ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ.
2/ 7
ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 33 ಕೋಟಿ ಗಳಿಸಿದ್ದು, ಹೀರೋಯಿನಗ ಓರಿಯೆಂಟೆಡ್ ಸಿನಿಮಾ ತೆಲುಗು ಇಂಡಸ್ಟ್ರಿಯಲ್ಲಿ ಇಷ್ಟು ಗಳಿಸಿರುವುದು ಗಮನಾರ್ಹ.
3/ 7
ಕಾಂತಾರ ಸಿನಿಮಾವನ್ನು ಬಿಗ್ಸ್ಕ್ರೀನ್ನಲ್ಲಿ ನೋಡದವರು ಒಟಿಟಿಯಲ್ಲಿ ನೋಡಬಹುದು. ಯಶೋದಾ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಡಿಸೆಂಬರ್ 9ರಿಂದ ಸ್ಟ್ರೀಮ್ ಆಗಲಿದೆ.
4/ 7
ಸಿನಿಮಾ ತೆಲುಗು, ಮಲಯಾಳಂ, ಹಿಂದಿ, ಕನ್ನಡ, ತಮಿಳು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದ್ದು ನಿಮಗೆ ಬೇಕಾದ ಭಾಷೆಯಲ್ಲಿ ಮನೆಯಲ್ಲೇ ಕುಳಿತು ಸಿನಿಮಾ ಎಂಜಾಯ್ ಮಾಡಬಹುದು.
5/ 7
ಸಮಂತಾ ಅವರ ಅಭಿಮಾನಿಗಳು ಒಟಿಟಿಯಲ್ಲಿ ಸಿನಿಮಾ ನೋಡಲು ಎಕ್ಸೈಟ್ ಆಗಿರುವುದಾಗಿ ಕಾಮೆಂಟ್ ಮಾಡಿದ್ದಾರೆ. ಹಲವಾರು ಸಲ ಥಿಯೇಟರ್ನಲ್ಲಿ ನೋಡಿಯೂ ನಾವು ಮತ್ತೊಮ್ಮೆ ಒಟಿಟಿಯಲ್ಲಿ ನೋಡುತ್ತೇವೆ ಎಂದಿದ್ದಾರೆ.
6/ 7
ತಮಿಳಿನಲ್ಲಿ ಒರ್ ಇರವು, ಅಂಬುಲಿ, ಜಂಬುಲಿಂಗಂ ಸಿನಿಮಾ ಮಾಡಿದ ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಅವರು ಯಶೋದಾ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾ ತಮಿಳು, ಮಲಯಾಳಂ, ಹಿಂದಿ, ಕನ್ನಡದಲ್ಲಿ ಡಬ್ ಆಗಿದೆ.
7/ 7
ಸಮಂತಾ ಜೊತೆ ಉಣ್ಣಿ ಮುಕುಂದನ್, ವರಲಕ್ಷ್ಮಿ ಶರತ್ಕುಮಾರ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.