ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಬಗ್ಗೆ ಸಖತ್ ಕುತೂಹಲವಿದೆ. ಎಲ್ಲರೂ ಅವರ ಮುಂದಿನ ಸಿನಿಮಾ ಅನೌನ್ಸ್ಮೆಂಟ್ಗೆ ಕಾಯುತ್ತಿದ್ದಾರೆ.
2/ 7
ಯಶ್ ಅವರು ಐರಾ ಪ್ರೊಡಕ್ಷನ್ ಹೌಸ್ ಆರಂಭಿಸಿ ಅದರಲ್ಲೇ ಅವರ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈಗ ಅವರ ಸಿನಿಮಾ ಬಗ್ಗೆ ಗಾಂಧೀನಗರದಲ್ಲಿ ಚರ್ಚೆ ಜೋರಾಗಿದೆ.
3/ 7
ನಟ ತಮ್ಮ 19ನೇ ಸಿನಿಮಾ ನಿರೀಕ್ಷೆಯಲ್ಲಿರುವ ಜನರಿಗೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ. ಈ ಒಂದು ವಿಷಯ ಓಕೆ ಆದ್ರೆ ಮಾತ್ರ ನಟ ಸಿನಿಮಾ ಮಾಡ್ತಾರಂತೆ.
4/ 7
ಈ ಬಗ್ಗೆ ಮಾತನಾಡಿರುವ ಯಶ್ ಸ್ಕ್ರಿಪ್ಟ್ ನನಗೆ 100 ಪರ್ಸೆಂಟ್ ತೃಪ್ತಿ ಕೊಟ್ಟರೆ ಮಾತ್ರ ಮುಂದಿನ ಸಿನಿಮಾ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ ಯಶ್.
5/ 7
ಕೆಜಿಎಫ್ ನಂತರ ಯಶ್ ಸಿನಿಮಾ ಆಯ್ಕೆಯಲ್ಲಿ ಕೇರ್ಫುಲ್ ಆಗಿರುತ್ತಾರೆ ಎನ್ನುವುದಂತೂ ಪಕ್ಕಾ ಆಗಿದೆ. ಹಾಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ.
6/ 7
ಯಶ್ ಅವರು ಕೆಜಿಎಫ್ ಸಿನಿಮಾಗಳ ಮೂಲಕ ದಿಢೀರ್ ಯಶಸ್ಸು ಪಡೆದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಅಷ್ಟೇ ಅಲ್ಲದೆ ಈಗ ನಟನಿಗೆ ವಿದೇಶದಲ್ಲಿಯೂ ಅಭಿಮಾನಿಗಳಿದ್ದಾರೆ.
7/ 7
ಇತ್ತೀಚೆಗೆ ಮಗಳು ಐರಾ ಬರ್ತ್ಡೇ ಆಚರಿಸಿದ ನಟ ಫ್ಯಾಮಿಲಿ ಜೊತೆಗೂ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಹೀಗಿದ್ದರೂ ರಾಕಿಂಗ್ ಸ್ಟಾರ್ ಸಿನಿಮಾ ಬಗ್ಗೆ ಪ್ರತಿದಿನ ಅಪ್ಡೇಟ್ಗಾಗಿ ಕಾಯ್ತಿದ್ದಾರೆ ಜನ.