Yash Birthday: ದುಬೈನಲ್ಲಿ ರಾಕಿ ಭಾಯ್ ಬರ್ತ್ ಡೇ ಸೆಲೆಬ್ರೇಷನ್! ಫ್ಯಾಮಿಲಿ & ಫ್ರೆಂಡ್ಸ್ ಜೊತೆ ಪಾರ್ಟಿ, ಫೋಟೋ ವೈರಲ್
ರಾಕಿಂಗ್ ಸ್ಟಾರ್ ಯಶ್ ತಮ್ಮ ಬರ್ತ್ ಡೇ ಆಚರಿಸಿಕೊಳ್ಳಲು ದುಬೈಗೆ ಹಾರಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಮಕ್ಕಳು ಹಾಗೂ ಸ್ನೇಹಿತರ ಜತೆ ಸೇರಿ ನಟ ಯಶ್ ದುಬೈಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಪತ್ನಿ ರಾಧಿಕಾ ಪಂಡಿತ್, ಮಕ್ಕಳು, ಅತ್ತೆ ಮಾವ ಹಾಗೂ ಕೆಲ ಸ್ನೇಹಿತರ ಜೊತೆ ನಟ ಯಶ್ ದುಬೈನಲ್ಲಿ ಸುತ್ತಾಡಿದ್ದಾರೆ. ದುಬೈನಲ್ಲಿ ಕಾಲಕಳೆದ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2/ 8
ಈ ಬಾರಿ ಯಶ್ ತಮ್ಮ ಬರ್ತ್ ಡೇಯನ್ನು ದುಬೈನಲ್ಲಿ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಸ್ನೇಹಿತರ ಜೊತೆ ಡಿನ್ನರ್ ಪಾರ್ಟಿ ಮಾಡಿದ್ದು, ಫೋಟೋ ವೈರಲ್ ಆಗಿದೆ.
3/ 8
ರಾಕಿಂಗ್ ಸ್ಟಾರ್ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಯಶ್ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಲ್ಲ ಎಂಬ ಸಂದೇಶವನ್ನು ಯಶ್ ಪತ್ರದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ರು.
4/ 8
ನೆಚ್ಚಿನ ನಟನ ಜನ್ಮದಿನ ಅಂದ್ರೆ ಸಾಕು ಅಭಿಮಾನಿಗಳಿಗೆ ಅದು ದೊಡ್ಡ ಹಬ್ಬವಾಗಿರುತ್ತದೆ. ಯಶ್ ರಾಜ್ಯದಲ್ಲಿ ಇಲ್ಲದಿದ್ರೂ ಅವರ ಅಭಿಮಾನಿಗಳು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
5/ 8
ಸೀರಿಯಲ್ ಗಳಲ್ಲಿ ಅಭಿನಯಿಸುತ್ತಾ ಬಣ್ಣದ ಲೋಕಕ್ಕೆ ಕಾಲಿಟ್ಟ ಯಶ್, 2007ರಲ್ಲಿ ತೆರೆಗೆ ಬಂದ 'ಜಂಬದ ಹುಡುಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ರು, ಬಳಿಕ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಯಶ್ ಪೂರ್ಣ ಪ್ರಮಾಣದ ನಾಯಕ ನಟನಾದ್ರು.
6/ 8
2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ರಾಕಿಂಗ್ ಸ್ಟಾರ್ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.
7/ 8
ನಂತರ ತೆರೆಗೆ ಬಂದ 'ಲಕ್ಕಿ', 'ಡ್ರಾಮಾ' ,'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು.
8/ 8
2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ನಿರ್ಮಿಸಿತು. ನಂತರ ರಿಲೀಸ್ ಆದ ಕೆಜಿಎಫ್-1, ಕೆಜಿಎಫ್ 2 ಸಿನಿಮಾ ಇತಿಹಾಸ ನಿರ್ಮಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡಿತು.