Yami Gautam: ಅಮ್ಮನ 33 ವರ್ಷದ ಹಳೇ ಸೀರೆಯುಟ್ಟು ಸಪ್ತಪದಿ ತುಳಿದ ನಟಿ ಯಾಮಿ ಗೌತಮ್..! Wedding Saree: ಸಾಮಾನ್ಯವಾಗಿ ಮದುವೆ ಅಂದ ಕೂಡಲೇ ಹೆಣ್ಣು ಮಕ್ಕಳು ವಿನ್ಯಾಸಿತ ಹಾಗೂ ದುಬಾರಿ ಬೆಲೆಯ ಲೆಹೆಂಗಾ ಹಾಗೂ ಸೀರೆಗಳ ಶಾಪಿಂಗ್ ಮಾಡೋಕೆ ತಿಂಗಳು ಮೊದಲೇ ಪ್ಲಾನ್ ಮಾಡುತ್ತಾರೆ. ಆದರೆ ನಟಿ ಯಾಮಿ ತಮ್ಮ ಮದುವೆಯಲ್ಲಿ ಅಮ್ಮನ 33 ವರ್ಷದ ಹಳೇ ಸೀರೆಯುಟ್ಟು ಸಪ್ತಪದಿ ತುಳಿದಿದ್ದಾರಂತೆ. (ಚಿತ್ರಗಳು ಕೃಪೆ: ಯಾಮಿ ಗೌತಮ್ ಇನ್ಸ್ಟಾಗ್ರಾಂ ಖಾತೆ)
1 / 13
ಕನ್ನಡ ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್ ನಟಿ ಯಾಮಿ ಗೌಮತ್ ಇತ್ತೀಚೆಗಷ್ಟೆ ಉರಿ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
2 / 13
ಸರಳವಾಗಿ ತಮ್ಮ ಕುಟುಂಬಗಳ ಸಮ್ಮುಖದಲ್ಲಿ ನಡೆದ ವಿವಾಹದ ಬಗ್ಗೆ ಯಾಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಲೇ ಅವರ ಮದುವೆ ವಿಷಯ ತಿಳಿದಿದ್ದು.
3 / 13
ಮದುವೆಯಲ್ಲಿ ಯಾಮಿ ಗೌತಮ್ ತಮ್ಮ ಅಮ್ಮನ ಹಳೇ ಸೀರೆಯನ್ನುಟ್ಟೇ ಸಪ್ತಪದಿ ತುಳಿದಿದ್ದಾರಂತೆ.
4 / 13
ಕೆಂಪು ಬಣ್ಣದ ಈ ಸೀರೆ ಸುಮಾರು 33 ವರ್ಷ ಹಳೆಯದಾಗಿದ್ದು, ಮದುವೆಯಲ್ಲಿ ಅಮ್ಮನ ಸೀರೆಯನ್ನೇ ತೊಡಬೇಕೆಂದು ಯಾಮಿ ನಿರ್ಧರಿಸಿದ್ದರಂತೆ.
5 / 13
ಯಾಮಿ ಅವರ ಮದುವೆಗೆ ಅವರ ಅಜ್ಜಿ ಸಹ ಒಂದು ಉಡಗೊರೆ ನೀಡಿದ್ದಾರೆ. ಅದು ಕೆಂಪು ಬಣ್ಣದ ದುಪಟ್ಟ. ಹೌದು ಸೀರೆಯೊಂದಿಗೆ ಅಜ್ಜಿ ಕೊಟ್ಟಿದ್ದ ದುಪಟ್ಟಾ ಸಹ ಕ್ಯಾರಿ ಮಾಡಿದ್ದರಂತೆ ಯಾಮಿ.
6 / 13
ಅಪ್ಪನ ಕೆಂಪು ಬಣ್ಣದ ಹಳೇ ರೇಷ್ಮೆ ಸೀರೆಯಲ್ಲಿ ಚಿನ್ನದ ಕುಸುರಿ ಕೆಲಸ ಸಹ ಇದೆಯಂತೆ.
7 / 13
ಯಾಮಿ ತಮ್ಮ ವಿವಾಹವಾದ ನಂತರ ನಿತ್ಯ ಮದುವೆ ಹಾಗೂ ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
8 / 13
ಯಾಮಿ ಹಾಗೂ ಆದಿತ್ಯ ಧರ್ ಅವರ ಮದುವೆಯಲ್ಲಿ ಕೇವಲ 18 ಮಂದಿ ಮಾತ್ರ ಭಾಗಿಯಾಗಿದ್ದರು.
9 / 13
ಯಾಮಿ ತಮ್ಮ ಮದುವೆಯಲ್ಲಿ ಪಹಾಡಿ ವಧುವಿನಂತೆ ರೆಡಿಯಾಗಿದ್ದರು.
10 / 13
ನಟಿ ಯಾಮಿ ಗೌತಮ್ ಹಾಗೂ ಆದಿತ್ಯ ಧರ್ ಉರಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
11 / 13
ಸದ್ದಿಲ್ಲದೆ ಹಸೆಮಣೆ ಏರಿದ ಯಾಮಿ ಗೌತಮ್ಮ ಅವರ ಮೆಹೆಂದಿ ಶಾಸ್ತ್ರ ಫೋಟೋ
12 / 13
ಯಾಮಿ ಗೌತಮ್ ಅವರ ಅರಿಶಿಣ ಶಾಸ್ತ್ರ ಚಿತ್ರ.
13 / 13
ಯಾಮಿ ಗೌತಮ್ ಹಾಗೂ ಆದಿತ್ಯ ಧರ್ ಅವರ ಮದುವೆ ಫೋಟೋ
First published: June 11, 2021, 12:20 IST